ಮಂಗಳವಾರ, ನವೆಂಬರ್ 19, 2019
29 °C

‘ಸಾವರ್ಕರ್, ಗೋಡ್ಸೆ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ ಭೂಮಿ ಮೇಲಿರಬಾರದು’

Published:
Updated:

ಚಿತ್ರದುರ್ಗ: ವೀರ ಸಾವರ್ಕರ್‌ ಹಾಗೂ ನಾಥೂರಾಮ್‌ ಗೋಡ್ಸೆ ಬಗ್ಗೆ ಹಗುರವಾಗಿ ಮಾತನಾಡುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೂಮಿ ಮೇಲೆ ಇರಬಾರದು ಎಂದು ಆರೋಗ್ಯ ಸಚಿವ ಬಿ.ಶ್ರಿರಾಮುಲು ವಾಗ್ದಾಳಿ ನಡೆಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಿಗೆ ನಾಲಿಗೆಯ ಮೇಲೆ ಹಿಡಿತವಿಲ್ಲ. ಬಾಯಿ ಚಪಲಕ್ಕೆ ಅವರು ಮಾತನಾಡುತ್ತಾರೆ. ಸಾವರ್ಕರ್‌ ಬಗ್ಗೆ ಅವರು ಓದಿಕೊಂಡು ಮಾತನಾಡಲಿ’ ಎಂದರು.

‘ಗೋಡ್ಸೆಗೆ ಭಾರತ ರತ್ನ ನೀಡಲಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಪ್ರಚೋದನಕಾರಿಯಾಗಿದೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಭಾರತ ರತ್ನ ನೀಡದ ಕಾಂಗ್ರೆಸ್‌ಗೆ ಯಾವ ನೈತಿಕತೆ ಇದೆ? ಸಿದ್ದರಾಮಯ್ಯ ಅವರ ರಿಮೇಟ್‌ ಕಂಟ್ರೋಲ್‌ ದೆಹಲಿಯಲ್ಲಿದೆ. ಸೋನಿಯಾ ಗಾಂಧಿ ಹೇಳಿದಂತೆ ಅವರು ಮಾತನಾಡುತ್ತಾರೆ’ ಎಂದು ಹರಿಹಾಯ್ದರು.

ಪ್ರತಿಕ್ರಿಯಿಸಿ (+)