ಬೆಂಗಳೂರು – ಮಂಗಳೂರು ರೈಲು ಇಂದಿನಿಂದ ಪುನರಾರಂಭ

7

ಬೆಂಗಳೂರು – ಮಂಗಳೂರು ರೈಲು ಇಂದಿನಿಂದ ಪುನರಾರಂಭ

Published:
Updated:

ಬೆಂಗಳೂರು: ಬೆಂಗಳೂರು– ಮಂಗಳೂರು ಮಧ್ಯೆ ಸಂಚರಿಸುವ ರಾತ್ರಿ ರೈಲುಗಳ ಸಂಚಾರ ಅ. 10ರಿಂದ ಆರಂಭವಾಗಲಿದೆ. ಹಗಲು ವೇಳೆ ಸಂಚರಿಸುವ ರೈಲುಗಳು ಅ. 11ರಿಂದ ಪ್ರಯಾಣ ಆರಂಭಿಸಲಿವೆ.

ಆ. 14ರಿಂದ ಈ ಮಾರ್ಗದಲ್ಲಿ ಪದೇಪದೇ ಭೂಕುಸಿತವಾದ ಕಾರಣ ರೈಲು ಸಂಚಾರ ಸ್ಥಗಿತಗೊಂಡಿತ್ತು.

ಯಶವಂತಪುರ– ಕಣ್ಣೂರು/ ಕಾರವಾರ ಮಧ್ಯೆ ರಾತ್ರಿ ಸಂಚರಿಸುವ ರೈಲು (ಸಂಖ್ಯೆ 16511/16513) ಅ. 10ರಿಂದ ಸಂಚರಿಸಲಿದೆ. 

ಕಾರವಾರ– ಯಶವಂತಪುರ ಎಕ್ಸ್‌ಪ್ರೆಸ್‌ ಅನ್ನು (ಸಂಖ್ಯೆ 16516) ಅ. 11ರಂದು ರದ್ದುಗೊಳಿಸಲಾಗಿದೆ. ಈ ರೈಲು ಅ. 12ರಿಂದ ಸಂಚರಿಸಲಿದೆ.

ಹಬೀಬ್‌ಗಂಜ್‌– ಧಾರವಾಡ ಮಧ್ಯೆ ವಾರಕ್ಕೊಮ್ಮೆ ಸಂಚರಿಸುತ್ತಿರುವ ವಿಶೇಷ ರೈಲು (01664/01663) ಸಂಚಾರ ಅ. 12ರಿಂದಲೂ ಮುಂದುವರಿಯಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !