ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟಿಬಿ ನಾಗರಾಜ್‌ ₹ 1224 ಕೋಟಿ ಒಡೆಯ, ಪ್ರತಾಪ್‌ ಆಸ್ತಿ ₹ 2.29 ಕೋಟಿ

Last Updated 19 ಜೂನ್ 2020, 8:57 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್ತಿಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಅತಿ ಹೆಚ್ಚು ಮತ್ತು ಕಡಿಮೆ ಸಂಪತ್ತು ಹೊಂದಿದ ಇಬ್ಬರೂ ಬಿಜೆಪಿಗೆ ಸೇರಿದ್ದಾರೆ. ಎಂ.ಟಿ.ಬಿ.ನಾಗರಾಜ್‌ ₹1,224 ಕೋಟಿ ಸಂಪತ್ತಿನ ಒಡೆಯರಾಗಿದ್ದರೆ, ಪ್ರತಾಪಸಿಂಹ ನಾಯಕ್‌ ಕೇವಲ ₹2.29 ಕೋಟಿ ಸಂಪತ್ತಿನ ಮಾಲೀಕರು.

ಎಂ.ಟಿ.ಬಿ.ನಾಗರಾಜ್‌ ಅವರು ಉಪಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರಕ್ಕೆ ಹೋಲಿಸಿದರೆ, ₹24 ಕೋಟಿ ಆದಾಯ ಹೆಚ್ಚಾಗಿದೆ. ಉಪಚುನಾವಣೆಯಲ್ಲಿ ₹1200 ಕೋಟಿ ಚರಾಸ್ತಿ ಮತ್ತು ಸ್ಥಿರಾಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದರು.

ನಾಗರಾಜ್‌ ಬಳಿ ಏನೇನಿವೆ: ನಾಗರಾಜ್‌ ಹೆಸರಲ್ಲಿ ₹884 ಕೋಟಿಗೂ ಹೆಚ್ಚು ಆಸ್ತಿ, ಪತ್ನಿ ಶಾಂತಕುಮಾರಿ ಹೆಸರಿನಲ್ಲಿ ₹331 ಕೋಟಿ ಆಸ್ತಿ ಇದೆ. ನಾಗರಾಜ್‌ ಅವರು ₹52.72 ಕೋಟಿ ಮತ್ತು ಅವರ ಪತ್ನಿ ₹1.97 ಕೋಟಿ ಸಾಲ ಮಾಡಿದ್ದಾರೆ.

ವಜ್ರ, ಪ್ಲಾಟಿನಂ, ಚಿನ್ನಾಭರಣಗಳು, ದುಬಾರಿ ಬೆಲೆಯ ರೋಲ್ಸ್‌ ರಾಯ್ ಫಾಂಟಮ್‌‌, ಲ್ಯಾಂಡ್‌ ರೋವರ್‌, ಮರ್ಸಿಡಿಸ್‌ ಬೆಂಜ್‌, ಫಾರ್ಚೂನರ್‌ ಕಾರುಗಳನ್ನು ಹೊಂದಿದ್ದಾರೆ. ರೋಲ್ಸ್‌ ರಾಯ್‌ ಬೆಲೆ ಖರೀದಿಸಿದಾಗ ₹31 ಕೋಟಿ ಇತ್ತು.

ಪ್ರತಾಪ್‌ ಸಿಂಹ ನಾಯಕ್‌ ಆಸ್ತಿ ವಿವರ

ಮೇಲ್ಮನೆಗೆ ನಾಮಪತ್ರ ಸಲ್ಲಿಸಿದ ಏಳು ಜನರಲ್ಲಿ ಅತಿ ಕಡಿಮೆ ಆದಾಯ ಹೊಂದಿದವರು ಪ್ರತಾಪ್‌. ಇವರ ಒಟ್ಟು ಸಂಪತ್ತು ₹2.29 ಕೋಟಿ. ಚರಾಸ್ತಿ ₹45.53 ಲಕ್ಷ, ಸ್ಥಿರಾಸ್ತಿ ₹1.38 ಕೋಟಿ. ಪತ್ನಿ ಜ್ಯೋತಿ ನಾಯಕ್‌ ಹೆಸರಲ್ಲಿ ₹53.36 ಲಕ್ಷ ಚರಾಸ್ತಿ, ಮಗಳ ಹೆಸರಲ್ಲಿ ಯಾವುದೇ ಆಸ್ತಿ ಇಲ್ಲ.

ಉಳಿದ ಅಭ್ಯರ್ಥಿಗಳ ಆಸ್ತಿ ವಿವರ

* ಆರ್‌.ಶಂಕರ್‌ (ಬಿಜೆಪಿ)

ಒಟ್ಟು ಸ್ವತ್ತು ₹301 ಕೋಟಿ. ಶಂಕರ್‌ ಹೆಸರಿನಲ್ಲಿ ₹195 ಕೋಟಿ, ಪತ್ನಿ ಧನಲಕ್ಷ್ಮಿ ಹೆಸರಲ್ಲಿ ₹106 ಕೋಟಿ.

*ಸುನೀಲ್‌ ವಲ್ಯಾಪುರೆ (ಬಿಜೆಪಿ)

ಒಟ್ಟು ₹20 ಕೋಟಿ ಆಸ್ತಿ ಹೊಂದಿದ್ದಾರೆ. ₹20 ಲಕ್ಷ ಸಾಲ ಹೊಂದಿದ್ದು, ಸುನೀಲ್‌ ಬಳಿ ₹2.50 ಲಕ್ಷ ಮತ್ತು ಪತ್ನಿ ಬಳಿ ₹2 ಲಕ್ಷ ನಗದು ಇದೆ.

*ನಜೀರ್‌ ಅಹ್ಮದ್‌ (ಕಾಂಗ್ರೆಸ್‌)

ಒಟ್ಟು ಆಸ್ತಿ ₹36 ಕೋಟಿ ಸಂಪತ್ತು ಹೊಂದಿದ್ದಾರೆ. ಸ್ಥಿರಾಸ್ತಿ ₹17.75 ಕೋಟಿ, ಚರಾಸ್ತಿ ₹17.75 ಲಕ್ಷ. ಇವರ ವಿರುದ್ಧದ ಎರಡು ಪ್ರಕರಣಗಳು ಇತ್ಯರ್ಥವಾಗಿಲ್ಲ.

* ಬಿ.ಕೆ.ಹರಿಪ್ರಸಾದ್‌ (ಕಾಂಗ್ರೆಸ್‌)

ಒಟ್ಟು ₹14.62 ಕೋಟಿ ಆಸ್ತಿ ಹೊಂದಿದ್ದಾರೆ. ₹64 ಲಕ್ಷ ಚರಾಸ್ತಿ , ತಮ್ಮ ಬಳಿ ₹20 ಸಾವಿರ ನಗದು, ಪತ್ನಿ ಬಳಿ ₹10 ಸಾವಿರ ನಗದು ಇದೆ. ₹10.40 ಲಕ್ಷ ಮೌಲ್ಯದ ಠೇವಣಿ ವಿವಿಧ ಬ್ಯಾಂಕುಗಳಲ್ಲಿ ಇಟ್ಟಿದ್ದಾರೆ. ಮಾರುತಿ ಜೆನ್‌ ಮತ್ತು ಹುಂಡೈ ಕಾರುಗಳನ್ನು ಹೊಂದಿದ್ದಾರೆ.

*ಗೋವಿಂದರಾಜು (ಜೆಡಿಎಸ್‌)

ಒಟ್ಟು ₹80 ಕೋಟಿ ಆಸ್ತಿ ಹೊಂದಿದ್ದಾರೆ. ₹3.47 ಕೋಟಿ ಸಾಲ ಹೊಂದಿದ್ದಾರೆ. ದಂಪತಿ ಹೆಸರಲ್ಲಿ ₹14.17 ಕೋಟಿ ಚರಾಸ್ತಿ ಮತ್ತು ₹20 ಕೋಟಿ ಸ್ಥಿರಾಸ್ತಿ ಇದೆ. ತಮ್ಮದು ಅವಿಭಕ್ತ ಕುಟುಂಬವಾಗಿದ್ದು, ಕುಟುಂಬದ ಹೆಸರಿನಲ್ಲಿ ₹13.34 ಕೋಟಿ ಚರಾಸ್ತಿ ಮತ್ತು ₹23.11 ಕೋಟಿ ಸ್ಥಿರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT