ಕ್ಯಾಬ್ ಚಾಲಕನ ಬೆದರಿಸಿ ದರೋಡೆ

7

ಕ್ಯಾಬ್ ಚಾಲಕನ ಬೆದರಿಸಿ ದರೋಡೆ

Published:
Updated:

ರಾಮನಗರ: ಓಲಾ ಕ್ಯಾಬ್ ಚಾಲಕನನ್ನು ಬೆದರಿಸಿ ₹20 ಸಾವಿರ ದರೋಡೆ ಮಾಡಿದ ಆರೋಪಿಗಳು, ಚಾಲಕ ತಪ್ಪಿಸಿಕೊಳ್ಳುತ್ತಲೇ ತಾವೂ ಪರಾರಿಯಾಗಿದ್ದಾರೆ. 

ಶುಕ್ರವಾರ ರಾತ್ರಿ ಬೆಂಗಳೂರಿನ ಆಡುಗೋಡಿಯಿಂದ ಬೊಮ್ಮಸಂದ್ರಕ್ಕೆ ಆರೋಪಿಗಳು ಓಲಾ‌ ಕ್ಯಾಬ್ ಬುಕ್ ಮಾಡಿದ್ದರು.‌ ನಾಲ್ವರು ಕಾರು ಏರಿದ್ದು, ರಾತ್ರಿಯಿಡೀ ಬೆಂಗಳೂರು ಸುತ್ತಾಡಿ, ಚಾಕುವಿನಿಂದ ಚಾಲಕನನ್ನು ಬೆದರಿಸಿ ಆತನ ಬಳಿ ಇದ್ದ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆದಿದ್ದಾರೆ. ಬಳಿಕ ರಾಮನಗರ ಮಾರ್ಗವಾಗಿ ಚನ್ನಪಟ್ಟಣದತ್ತ ಬಂದಿದ್ದಾರೆ.

ಆರೋಪಿಗಳು ಚಾಲಕನೊಂದಿಗೆ ಶನಿವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಚನ್ನಪಟ್ಟಣದ ‌ಆನಂದ ಭವನ ವಸತಿ ಗೃಹದಲ್ಲಿ ಕೊಠಡಿ ಬಾಡಿಗೆ ಪಡೆದಿದ್ದರು. ಈ ಸಂದರ್ಭ ಚಾಲಕ ಸೋಮಶೇಖರ್ ಕೊಠಡಿಯ ಕಿಟಕಿಯಿಂದ ಹೊರಗೆ ಜಿಗಿದು ತಪ್ಪಿಸಿಕೊಂಡರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು.

ಚಾಲಕ‌ ತಪ್ಪಿಸಿಕೊಳ್ಳುತ್ತಲೇ ಆರೋಪಿಗಳು ಹೋಟೆಲ್‌ನಿಂದ ಪರಾರಿಯಾದರು. ಚನ್ನಪಟ್ಟಣ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !