ಶಿಕ್ಷಕರ ವರ್ಗ ನಿಯಮ ಬದಲಿಗೆ ಒಪ್ಪಿಗೆ

7

ಶಿಕ್ಷಕರ ವರ್ಗ ನಿಯಮ ಬದಲಿಗೆ ಒಪ್ಪಿಗೆ

Published:
Updated:

ಬೆಂಗಳೂರು: ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಬೇಕಾದರೆ ಒಂದು ವಲಯದಲ್ಲಿ ಕನಿಷ್ಠ ಐದು ವರ್ಷ ಪೂರೈಸಿರಬೇಕು ಎಂಬ ನಿಯಮವನ್ನು ಮೂರು ವರ್ಷಕ್ಕೆ ಇಳಿಸಲು ಸಚಿವ ಸಂಪುಟ ನಿರ್ಧರಿಸಿದೆ.

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ 2017 ತಿದ್ದುಪಡಿ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾಗಿತ್ತು. ಆದರೆ, ಅದಿನ್ನೂ ಅಂಗೀಕಾರ ಆಗಿಲ್ಲ.

ಶಿಕ್ಷಕ ದಂಪತಿ ಪೈಕಿ ಪತಿ, ಪತ್ನಿ ಅಥವಾ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ ಪತಿ–ಪತ್ನಿ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಣೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಇವರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡುವ ಪ್ರಸ್ತಾವಕ್ಕೂ ಒಪ್ಪಿಗೆ ನೀಡಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !