ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13ರವರೆಗೆ ಡಿ.ಕೆ ಶಿವಕುಮಾರ್‌ ಇ.ಡಿ ವಶಕ್ಕೆ

Last Updated 4 ಸೆಪ್ಟೆಂಬರ್ 2019, 19:42 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌ ಅವರನ್ನು ಇದೇ 13ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿ ದೆಹಲಿಯ ವಿಶೇಷ ನ್ಯಾಯಾಲಯ ಬುಧವಾರ ಆದೇಶಿಸಿದೆ.

ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ತನಿಖೆ ತಾರ್ಕಿಕ ಅಂತ್ಯಕ್ಕೆ ಹೋಗಲು ಅವಕಾಶ ಕೊಡಬೇಕು ಎಂದುವಿಶೇಷ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹರ್‌ ಹೇಳಿದರು.

ದೆಹಲಿಯ ಕೇಂದ್ರ ಕಚೇರಿಯಲ್ಲಿ ಶಿವಕುಮಾರ್‌ ಅವರನ್ನುಆ. 30ರಿಂದ ಸೆ. 3ರವರೆಗೆ ತನಿಖೆಗೆ ಒಳಪಡಿಸಲಾಗಿತ್ತು. ಅವರು ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ಕೊಡುತ್ತಿದ್ದರು, ತನಿಖೆಗೆ ಸಹಕರಿಸಿಲ್ಲ. ಹಾಗಾಗಿ, ಅವರನ್ನು 14 ದಿನಗಳ ಮಟ್ಟಿಗೆ ಕಸ್ಟಡಿಗೆ ಕೊಡಬೇಕು ಎಂದು ಇ.ಡಿ. ವಕೀಲರು ವಾದಿಸಿದರು.

ಮಂಗಳವಾರ ರಾತ್ರಿ ಬಂಧಿಸ
ಲಾಗಿದ್ದ ಅವರನ್ನು ಬುಧವಾರ ಮಧ್ಯಾಹ್ನದ ನಂತರ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವೈದ್ಯಕೀಯ ಪರೀಕ್ಷೆಗಾಗಿ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ಅವರನ್ನು ಮಂಗಳವಾರ ಕರೆದೊಯ್ಯಲಾಗಿತ್ತು. ಆಗ ಅವರ ರಕ್ತದೊತ್ತಡದಲ್ಲಿ ಏರು‍ಪೇರು ಕಾಣಿಸಿದ ಕಾರಣ ಅಲ್ಲಿ ದಾಖಲಿಸಲಾಗಿತ್ತು.

ಅವರಿಗೆ ಷರತ್ತುಬದ್ಧ ಜಾಮೀನು ನೀಡಲು ಸಾಧ್ಯವಿಲ್ಲ. ಈ ಪ್ರಕರಣವು ಕಸ್ಟಡಿ ವಿಚಾರಣೆಗೆ ಅರ್ಹವಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಪ್ರಕಾರ, ಜಾಮೀನು ಅರ್ಜಿಗೆ ಪ್ರತಿಕ್ರಿಯೆ ನೀಡಲು ಅರ್ಜಿಯ ಪ್ರತಿಯನ್ನು ಇ.ಡಿ ವಕೀಲರಿಗೆ ನೀಡಬೇಕು. ಇ.ಡಿ. ವಕೀಲರ ಪ್ರತಿಕ್ರಿಯೆ ಬಳಿಕ ಈ ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.

ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬುದಕ್ಕೆ ಡಿಕೆಶಿ ಬಂಧನ ಮತ್ತೊಂದು ಉದಾರಹಣೆ. ಇ.ಡಿ., ಸಿಬಿಐನಂತಹ ಸಂಸ್ಥೆಗಳನ್ನು ಬಳಸಿಕೊಂಡು ಆಯ್ದ ವ್ಯಕ್ತಿಗಳನ್ನು ಗುರಿ ಮಾಡಲಾಗುತ್ತಿದೆ.

-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ವಿಚಾರಣೆಯ ನಡುವೆ

lಶಾಸಕರಾದ ರಂಗನಾಥ್‌, ಲಕ್ಷ್ಮಿ ಹೆಬ್ಬಾಳ್ಕರ್‌ ಹಾಗೂ ಕುಟುಂಬದ ಸದಸ್ಯರು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಹಾಜರಿದ್ದರು

lಕುಟುಂಬ ಸದಸ್ಯರನ್ನು ಭೇಟಿಯಾಗಲು 15 ನಿಮಿಷದ ಅವಕಾಶ

lಶಾಂತಿ ಕಾಪಾಡುವಂತೆ ಕರ್ನಾಟಕದ ಜನರಿಗೆ ಮನವಿ ಮಾಡಲು ಕೋರಿದ್ದ ಅವಕಾಶಕ್ಕೆ ಕೋರ್ಟ್‌ ನಿರಾಕರಣೆ

ವಾದ–ಪ್ರತಿವಾದ

14 ದಿನಗಳ ಕಸ್ಟಡಿ ಕೇಳಿದ್ದನ್ನು ಶಿವಕುಮಾರ್‌ ಪರ ಹಾಜರಾಗಿದ್ದ ಹಿರಿಯ ವಕೀಲ ಎ.ಎಂ. ಸಿಂಘ್ವಿ ಮತ್ತು ದಯನ್‌ ಕೃಷ್ಣ್‌ ಅವರು ವಿರೋಧಿಸಿದರು. 2017ರಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ್ದ ಶೋಧದ ಆಧಾರದಲ್ಲಿ ಇಡೀ ಪ್ರಕರಣ ನಿಂತಿದೆ. ಆದಾಯ ತೆರಿಗೆ ಇಲಾಖೆಯು 2018ರ ಜೂನ್‌ 13ರಂದು ಪ್ರಕರಣ ದಾಖಲಿಸಿದೆ. ಇದಕ್ಕೆ 2019ರ ಆಗಸ್ಟ್‌ 20ರಂದು ಕರ್ನಾಟಕ ಹೈಕೋರ್ಟ್‌ ನೀಡಿದ್ದ ತಡೆಯಾಜ್ಞೆ ಈಗಲೂ ಊರ್ಜಿತ ಎಂದು ಅವರು ವಾದಿಸಿದರು.

ಆದಾಯ ತೆರಿಗೆ ಇಲಾಖೆಯ ತನಿಖೆ ಮತ್ತು ಸಾಕ್ಷಿಗಳ ಹೇಳಿಕೆಗಳು ಶಿವಕುಮಾರ್‌ ವಿರುದ್ಧ ಹಲವು ಪುರಾವೆಗಳನ್ನು ಒದಗಿಸಿವೆ. ಇ.ಡಿ ನೀಡಿದ್ದ ನೋಟಿಸ್‌ಗಳಿಗೆ ಅವರು ಹಾಜರಾಗಿದ್ದಾರೆ ಎಂಬುದು ನಿಜ. ಆದರೆ, ಅವರು ಹಾರಿಕೆಯ ಉತ್ತರ ನೀಡುವ ಮೂಲಕ ಸತ್ಯವನ್ನು ಮುಚ್ಚಿಟ್ಟಿದ್ದಾರೆ ಎಂದು ಇ.ಡಿ. ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಕೆ.ಎಂ. ನಟರಾಜ್‌ ಮತ್ತು ವಕೀಲ ನವೀನ್‌ ಕುಮಾರ್‌ ಮಟ್ಟಾ ಅವರು ಹೇಳಿದರು.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ. ಇದು ಪಿಎಂಎಲ್‌ಎ ಅಡಿಯಲ್ಲಿ ಸ್ವತಂತ್ರವಾದ ಅಪರಾಧ. ಹಾಗಾಗಿ, ಅವರ ವಿರುದ್ಧ ಇರುವುದು ಆದಾಯ ತೆರಿಗೆ ಪ್ರಕರಣ ಮಾತ್ರ ಎಂಬ ವಾದದಲ್ಲಿ ಹುರುಳಿಲ್ಲ. ಜತೆಗೆ, ಅಪರಾಧ ಒಳಸಂಚು ಪ್ರಕರಣವೂ ಇದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT