ಶನಿವಾರ, ಜನವರಿ 25, 2020
15 °C

ಮೋದಿ ಅಂದ್ರೆ ಸಮಸ್ಯೆ ಬಗೆಹರಿಯದು: ಸಿದ್ದರಾಮಯ್ಯ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾ ಮಹೋ ತ್ಸವದಲ್ಲಿ ಮೋದಿ ಮೋದಿ ಎಂದು ಜನರು ಕೂಗಿದ್ದಕ್ಕೆ ಸಿದ್ದರಾಮಯ್ಯ ಗರಂ ಆದ ಪ್ರಸಂಗ ಭಾನುವಾರ ನಡೆಯಿತು.

ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು, ‘ಹೀಗೆ ಕೂಗಿದರೆ ನೆರೆ ಸಂತ್ರಸ್ತರ ಸಮಸ್ಯೆ ಹಾಗೂ ದೇಶದ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದರು.

‘ದೇಶದಲ್ಲಿ ಈಚೆಗೆ ಮೋದಿ ಎಂದು ಕೂಗುವುದು ಫ್ಯಾಷನ್ ಆಗಿದೆ. ಈ ಯುವಕರಿಗೆ ಯಾವುದೇ ಜವಾಬ್ದಾರಿ ಇಲ್ಲ. ಹೀಗೆ ಕೂಗುವುದರಿಂದ ಪ್ರವಾಹ, ದೇಶದ ಸಮಸ್ಯೆಗಳು ಬಗೆಹರಿಯುವುದಿಲ್ಲ’ ಎಂದು ವ್ಯಂಗ್ಯವಾಡಿದರು. 

‘ಮಂಗಳೂರು ಪೊಲೀಸರ ತಪ್ಪಿನಿಂದ ಗಲಾಟೆ ಆಗಿದೆ. ಪೊಲೀ ಸರಿಗೆ ಯಾವುದೇ ಗಾಯಗಳಾಗಿಲ್ಲ. ಈ ಬಗ್ಗೆ ಸಿ.ಡಿ ಇದ್ದರೆ ಸವದಿ ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ಭಟ್ಟಂಗಿತನ ತೋರುವುದಲ್ಲ. ಬ್ಲೂ ಫೀಲಂ ನೋಡಿ ದವರಿಂದ ನಾನು ಪಾಠ ಕಲಿಯಬೇಕಿಲ್ಲ’ ಎಂದು ತಿರುಗೇಟು ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು