ಮಂಗಳವಾರ, ಮಾರ್ಚ್ 31, 2020
19 °C

ಕೊರೊನಾ ಸೋಂಕು: ರಾಜ್ಯಕ್ಕೆ 3ನೇ ಸ್ಥಾನ, ಎಚ್ಚರ ವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ ಮಧ್ಯಾಹ್ನದವರೆಗೆ 41 ಇದ್ದ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಸಂಜೆ ಹೊತ್ತಿಗೆ 51ಕ್ಕೆ ಏರಿತು. ಈ ಮೂಲಕ ಕರ್ನಾಟಕವು ಮಹಾರಾಷ್ಟ್ರ (128), ಕೇರಳ (118) ನಂತರದ ಸ್ಥಾನಕ್ಕೇರಿತು. 

ರಾಜ್ಯದಲ್ಲಿ ಗುರುವಾರ ಒಂದೇ ದಿನ 10 ಕೊರೊನಾ ವೈರಸ್‌ ಪ್ರಕರಣಗಳು ದೃಢವಾಗಿದ್ದು, ಸಹಜವಾಗಿಯೇ ಆತಂಕ ಮೂಡಿಸಿದೆ. ಇನ್ನು ಈ ಬೆಳವಣಿಗೆ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಕೊಂಚ ಅಸಹಾಯಕತೆಯಿಂದಲೇ ಮಾತನಾಡಿದ್ದಾರೆ.  ‘ನಿನ್ನೆ 41 ಇದ್ದ ಪ್ರಕರಣಗಳು ಇಂದು 51 ಆಗಿದೆ. ಮುಂದೆ ಏನಾಗುತ್ತದೋ ಹೇಳಲಾಗುತ್ತಿಲ್ಲ,’ ಎಂದು ಕಳಾಹೀನರಾಗಿ ನುಡಿದಿದ್ದು ರಾಜ್ಯದ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿತು. 

ರಾಜ್ಯದಲ್ಲಿ ಕೊರೊನಾ ವೈರಸ್‌ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಲಾಕ್‌ಡೌನ್‌ಗೆ ಬದ್ಧರಾಗಿರಬೇಕು, ಮನೆಗಳಿಂದ ಹೆಚ್ಚು ಹೊರಬರಬಾರದು ಎಂಬುದು ಸರ್ಕಾರ, ವೈದ್ಯರು ಸಲಹೆಯಾಗಿದೆ. ಅಲ್ಲದೆ, ಸೋಂಕು ತಡೆಯುವ ಕ್ರಮಗಳನ್ನೂ ಕಟ್ಟು ನಿಟ್ಟಾಗಿ ಪಾಲಿಸಬೇಕಾದ ತುರ್ತು ಎದುರಾಗಿದೆ. 

ಸೋಂಕು ತಡೆಯುವ ಕ್ರಮಗಳು ಮುನ್ನೆಚ್ಚರಿಕೆ ಕ್ರಮಗಳು...

* ಪದೇ ಪದೇ ಸಾಬೂನು ಬಳಸಿ ಕೈಗಳನ್ನು ಸ್ವಚ್ಛಗೊಳಿಸುವುದು.

* ಕೈ ತೊಳೆಯದೇ ಕಣ್ಣು, ಬಾಯಿ, ಮೂಗನ್ನು ಮುಟ್ಟದೇ ಇರುವುದು.

* ಸೋಂಕಿತರಿಂದ ಸಾಧ್ಯವಾದಷ್ಟು ದೂರ ಇರುವುದು.

* ಮುಖಗವಸು ಅಥವಾ ಮಾಸ್ಕ್‌ ಬಳಕೆ ಮಾಡುವುದು

* ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಬೇಕು

* ವನ್ಯಜೀವಿಗಳು ಹಾಗೂ ಫಾರ್ಮ್‌ಗಳಲ್ಲಿ ಬೆಳೆಸಿರುವ ಪ್ರಾಣಿಗಳನ್ನು ಮುಟ್ಟುವಾಗ ಸುರಕ್ಷಿತಾ ಕವಚಗಳನ್ನು ಬಳಕೆ ಮಾಡುವುದು. 

* ಶೀತ, ನೆಗಡಿ, ಜ್ವರ ಕಾಣಿಸಿಕೊಂಡರೆ ಮನೆಯಲ್ಲಿ ವಿಶ್ರಾಂತಿ ಪಡೆಯುವುದು.

* ಮೇಲಿನ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿಸುವುದು.

ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬೇಕಾದವರಿಗೆ ಮಾರ್ಗಸೂಚಿಗಳು 

– ಪ್ರತ್ಯೇಕ ವಾಸದ ಅವಧಿಯಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ವರದಿ ಮಾಡಿಕೊಳ್ಳಬೇಕು

– ಪ್ರತ್ಯೇಕ ಶೌಚಾಲಯ ಇರುವ ಕೊಠಡಿಯಲ್ಲಿ ಇರಬೇಕು 

– ಮನೆಯಿಂದ ಹೊರಗಡೆ ಹೋಗಬಾರದು. ಕುಟುಂಬದ ಸದಸ್ಯರೊಂದಿಗೂ ಅಂತರ ಕಾಯ್ದುಕೊಳ್ಳಬೇಕು

– ಕುಟುಂಬದ ಸದಸ್ಯರೊಂದಿಗೆ ಸಂವಹನ ನಡೆಸಿದರೂ ಕನಿಷ್ಠ 2 ಮೀಟರ್ ಅಂತರ ಇಟ್ಟುಕೊಳ್ಳಬೇಕು

– ಮನೆಗಳಿಗೆ ಸಂದರ್ಶಕರು ಬರುವುದನ್ನು ತಡೆಯಬೇಕು

– ಬಾಯಿ, ಕಣ್ಣು, ಮೂಗನ್ನು ಮುಟ್ಟಿಕೊಳ್ಳಬಾರದು

– ಮುಖಗವಸು ಧರಿಸಿರಬೇಕು. ಆಗಾಗ ಸ್ಯಾನಿಟೈಸರ್‌ನಿಂದ ಕೈಗಳನ್ನು ತೊಳೆದುಕೊಳ್ಳಬೇಕು

– ಕೆಮ್ಮುವಾಗ, ಸೀನುವಾಗ ಕರವಸ್ತ್ರವನ್ನು ಬಳಕೆ ಮಾಡಬೇಕು

– ಎಲ್ಲೆಂದರಲ್ಲಿ ಉಗುಳುವ ಹವ್ಯಾಸ ರೂಢಿಸಿಕೊಳ್ಳಬಾರದು

– ಮಕ್ಕಳು, ವೃದ್ಧರು, ಗರ್ಭಿಣಿಯರಿಂದ ಆದಷ್ಟು ಅಂತರ ಕಾಯ್ದುಕೊಳ್ಳಬೇಕು

–ಯಾವುದೇ ಸಾರ್ವಜನಿಕ ಸಭೆ, ಸಮಾರಂಭದಲ್ಲಿ ಭಾಗವಹಿಸಬಾರದು

–6ರಿಂದ 8 ಗಂಟೆಗೊಮ್ಮೆ ಮಾಸ್ಕ್‌ ಬದಲಿಸಬೇಕು

–ಬಳಸಿದ ಮಾಸ್ಕ್‌ಗಳನ್ನು ಮುಚ್ಚಳವಿರುವ ಕಸದ ತೊಟ್ಟಿಯಲ್ಲಿ ಹಾಕಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು

–14 ದಿನಗಳ ಅವಧಿಯಲ್ಲಿ ಜ್ವರ, ಕೆಮ್ಮು, ನೆಗಡಿಯಾದರೆ ಹತ್ತಿರದ ಆಸ್ಪತ್ರೆಯನ್ನು ಸಂಪರ್ಕಿಸಬೇಕು

ಆರೋಗ್ಯ ಸಹಾಯವಾಣಿ: 104 ಅಥವಾ 080 66692000/ 46848600 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು