ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ: ‘ದೇವರ ದರ್ಶನ’ಕ್ಕೆ ಕಠಿಣ ನಿಯಮ

Last Updated 7 ಜೂನ್ 2020, 20:58 IST
ಅಕ್ಷರ ಗಾತ್ರ

ಬೆಂಗಳೂರು: ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಅವುಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಸೂಚಿಸಿದೆ.

ದೇವಸ್ಥಾನಗಳಿಗೆ ನಿಯಮ
* ಜನದಟ್ಟಣೆ ಇರಬಾರದು. 6 ಅಡಿ ಅಂತರ ಪಾಲಿಸಬೇಕು, ಮಾಸ್ಕ್‌ ಧರಿಸುವುದು ಕಡ್ಡಾಯ.
* ದೇವಸ್ಥಾನದ ಬಾಗಿಲಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯವಾಗಿ ಮಾಡಲೇಬೇಕು. ದೇವಸ್ಥಾನಕ್ಕೆ ಬರುವವರು ಆಪ್ತಮಿತ್ರ ಆ್ಯಪ್‌ ಕಡ್ಡಾಯವಾಗಿ ತೋರಿಸಬೇಕು. ದೇವಸ್ಥಾನಕ್ಕೆ ಭೇಟಿ ಕೊಡುವ ಮೊದಲು ಸ್ಯಾನಿಟೈಸ್‌ ಮಾಡುವುದು ಕಡ್ಡಾಯ.
* ಪ್ರವೇಶಕ್ಕೆ ಮತ್ತು ಹೊರ ಹೋಗುವುದಕ್ಕೆ ಪ್ರತ್ಯೇಕ ದ್ವಾರಗಳ ವ್ಯವಸ್ಥೆಮಾಡುವುದು ಕಡ್ಡಾಯ. ದೇವಸ್ಥಾನದಲ್ಲಿರುವ ಪ್ರತಿಮೆ, ಪುಸ್ತಕ, ಕಂಬ ಇತ್ಯಾದಿಗಳನ್ನು ಮುಟ್ಟಬಾರದು. ಗುಂಪು ಹಾಡುಗಾರಿಕೆ, ಸಂಗೀತ ಕಚೇರಿಗಳಿಗೆ ಅನುಮತಿ ಇಲ್ಲ.
* ತೀರ್ಥ– ಪ್ರಸಾದ ವಿತರಣೆ, ತೀರ್ಥ ಪ್ರೋಕ್ಷಣೆ ಮಾಡುವಂತಿಲ್ಲ. ಅಂತರ ಪಾಲಿಸುವುದು ಕಡ್ಡಾಯ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.

ಚರ್ಚ್‌ಗಳಿಗೆ ನಿಯಮ
*ಸ್ವಚ್ಚತೆಯ ಜತೆಗೆ, ವೈಯಕ್ತಿಕ ಅಂತರ ಕಾಪಾಡಬೇಕು. ಗುಂಪಿನಲ್ಲಿ ಚರ್ಚ್‌ ಪ್ರವೇಶಿಸುವಂತಿಲ್ಲ. ಧಾರ್ಮಿಕ ಕ್ರಿಯೆ ಆರಂಭಕ್ಕೂ ಅರ್ಧ ಗಂಟೆ ಮೊದಲೇ ಬರಬೇಕು.
* ಥರ್ಮಲ್‌ ಸ್ಕ್ರೀನಿಂಗ್‌ ಬಳಿಕವೇ ಪ್ರತಿಯೊಬ್ಬರನ್ನೂ ಒಳಗೆ ಬಿಡಬೇಕು. ಒಂದು ಬೆಂಚ್‌ನಲ್ಲಿಇಬ್ಬರಿಗೆ ಮಾತ್ರ ಕೂರಲು ಅವಕಾಶ ನೀಡಬೇಕು. ಪ್ರಸಾದವನ್ನು ಬಾಯಿಗೆ ಹಾಕದೇ ಕೈಗೆ ನೀಡಬೇಕು.
* ಪವಿತ್ರ ಜಲ ಪ್ರೋಕ್ಷಣೆ ನಿಷಿದ್ಧ, ದೇವರ ಮೂರ್ತಿ ಮತ್ತು ಇತರ ಧಾರ್ಮಿಕ ಚಿಹ್ನೆಗಳನ್ನು ಮುಟ್ಟುವಂತಿಲ್ಲ ಮತ್ತು ಮುತ್ತಿಡುವಂತಿಲ್ಲ. ಪೂಜೆ ಮುಗಿದ ತಕ್ಷಣ ಅನಗತ್ಯವಾಗಿ ಗುಂಪು ಸೇರಿ ಮಾತನಾಡುವಂತಿಲ್ಲ.
* ಪೂಜೆಗೆ ಮೊದಲು ಮತ್ತು ನಂತರ ಕಡ್ಡಾಯವಾಗಿ ಸ್ಯಾನಿಟೈಸೇಶನ್‌ಮಾಡಬೇಕು. ಚರ್ಚ್‌ನಿಂದ ಹೊರಗೆಯೂ ಅಭಿನಂದಿಸಲು ಮತ್ತು ಇತರ ಕಾರಣಗಳಿಗೆ ಹಸ್ತ ಲಾಘವ ಮಾಡುವುದು ಅಥವಾ ತಬ್ಬಿಕೊಳ್ಳುವುದನ್ನು ನಿಷೇಧಿಸಲಾಗಿದೆ.
* ಬೌದ್ಧ, ಜೈನ, ಪಾರ್ಸಿ, ಸಿಖ್‌ ಮಂದಿರಗಳಿಗೂ ಇದೇ ರೀತಿಯಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಮಸೀದಿಗಳಿಗೆ ನಿಯಮ
* ಸಾಮೂಹಿಕ ಪ್ರಾರ್ಥನೆ ನಿಷಿದ್ಧ, ನಮಾಜ್‌ಗೆ ಮಸೀದಿ ಚಾಪೆ ಬಳಸುವಂತಿಲ್ಲ ಮನೆಯಿಂದಲೇ ಒಯ್ಯಬೇಕು ಮತ್ತು ಹಿಂದಕ್ಕೆ ತೆಗೆದುಕೊಂಡು ಹೋಗಬೇಕು. ಜಾಗೃತಿ ಫಲಕ ಅಳವಡಿಸುವುದು ಕಡ್ಡಾಯ.
* ನಮಾಜ್‌ಗೆ ಮುನ್ನ ಮತ್ತು ನಂತರ ಪ್ರಾರ್ಥನಾ ಸ್ಥಳವನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು. ವೈಯಕ್ತಿಕ ಅಂತರ ಇರಲೇಬೇಕು.
* ಪ್ರಾರ್ಥನೆಗೆ ಸಮಯ ನಿಗದಿ ಮಾಡಲಾಗಿದೆ; ಮಧ್ಯಾಹ್ನ 12.45 ರಿಂದ 1.15, ಮಧ್ಯಾಹ್ನ 1.30 ರಿಂದ 2.00, ಮಧ್ಯಾಹ್ನ 2.15 ರಿಂದ 3.00 ಗಂಟೆಯವರೆಗೆ.
* ಮಕ್ತಾದ್‌ ಮತ್ತು ಮದರಸಾ ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲಿ ಅಧ್ಯಯನಕ್ಕೆ ಅವಕಾಶ ಇಲ್ಲ. ಧಾರ್ಮಿಕ ಪಠಣ, ಚಿಂತನ ಮಂಥನ ಅವಕಾಶ ಇಲ್ಲ.
* ಮಸೀದಿಯಲ್ಲಿ ಮದುವೆಗೆ ಅವಕಾಶ ಇಲ್ಲ.
* ಪರಸ್ಪರ ಆಲಿಂಗನ, ಹಸ್ತಲಾಘವ ಮತ್ತು ಶುಭಕೋರಲು ಅವಕಾಶ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT