ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ತಗುಲಿ ಮೃತಪಟ್ಟ ಸಿದ್ದಿಕಿ ಮಗನ ಸಂದರ್ಶನ: ಪತ್ರಕರ್ತರ ಮೇಲೆ ನಿಗಾ

Last Updated 14 ಮಾರ್ಚ್ 2020, 7:55 IST
ಅಕ್ಷರ ಗಾತ್ರ

ಕಲಬುರ್ಗಿ:ಕೋವಿಡ್-19 ವೈರಸ್ ತಗುಲಿ ಮೃತಪಟ್ಟ ನಗರದ ಮೋಮಿನಪುರ ನಿವಾಸಿ ಮೊಹ್ಮದ್ ಹುಸೇನ್ ಸಿದ್ದಿಕಿ (76) ಅವರ ಮಗನ ಜೊತೆ ಸಂದರ್ಶನ ನಡೆಸಿದ್ದ ಇಬ್ಬರು ಪತ್ರಕರ್ತರು ಹಾಗೂ ಓರ್ವ ಕ್ಯಾಮರಾಮನ್‌ ಮೇಲೆ ನಿಗಾ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಹೇಳಿದರು.

ಶರತ್‌ ಅವರು ನಗರದಲ್ಲಿ ಬೆಳಗ್ಗೆ ಸುದ್ದಿಗೋಷ್ಟಿ ನಡೆಸಿದರು.ಸಿದ್ದಿಕಿ ಅವರ ಮಗನೊಂದಿಗೆ ಸಂದರ್ಶನ ನಡೆಸಿದ್ದಸ್ಥಳೀಯ ಉರ್ದು ಚಾನೆಲ್ ವರದಿಗಾರ, ರಾಜ್ಯಮಟ್ಟದ ‌ವಾಹಿನಿಯೊಂದರ ಜಿಲ್ಲಾ ವರದಿಗಾರ ‌ಹಾಗೂ ಕ್ಯಾಮೆರಾಮನ್ ಸುದ್ದಿಗೋಷ್ಟಿಗೆ ಆಗಮಿಸಿದ್ದರು. ಈ ವೇಳೆಮಾತು ಆರಂಭಿಸುವ ಮೊದಲು,ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ತಿಳಿಸಿದರು. ಮಾತ್ರವಲ್ಲದೆ,ಮನೆಯಲ್ಲಿಯೂ 14 ದಿನಗಳವರೆಗೆ ಪ್ರತ್ಯೇಕವಾಗಿ ಇರಬೇಕು ಎಂದರು. ‌

ಸಿದ್ದಿಕಿ ಅವರೊಂದಿಗೆ ಒಡನಾಟ ಹೊಂದಿದ್ದ 46 ಜನ ಸೇರಿದಂತೆ ಅವರ ಅಂತ್ಯಕ್ರಿಯೆಯಲ್ಲಿ‌ ಭಾಗವಹಿಸಿದ್ದ 71 ಜನರ ಮೇಲೆ ಜಿಲ್ಲಾಡಳಿತ ‌ನಿಗಾ ವಹಿಸಿದ್ದು, ಅವರನ್ನು ‌ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸಲಾಗಿದೆ ‌ಎಂದೂ ತಿಳಿಸಿದರು.

ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣಿಸಿ, ಅಗತ್ಯಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಅವರು,ವೈರಸ್‌ ಕುರಿತು ಜನರಲ್ಲಿ ಅರಿವು ಮೂಡಿಸಲು ಸಹಕರಿಸುವಂತೆ ಮಾಧ್ಯಮದವರನ್ನು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT