ಶನಿವಾರ, ಜುಲೈ 31, 2021
24 °C
ಬೆಂಗಳೂರು ನಗರ 8 ವಲಯವಾಗಿ ವಿಂಗಡಿಸಿ ಜವಾಬ್ದಾರಿ

ಕೋವಿಡ್‌ ನಿಯಂತ್ರಣ | ಎಂಟು ಸಚಿವರಿಗೆ ಬೆಂಗಳೂರು ಉಸ್ತುವಾರಿ: ಜೆ.ಸಿ.ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕೆ ಬೆಂಗಳೂರು ನಗರವನ್ನು 8 ವಲಯಗಳನ್ನಾಗಿ ಮಾಡಿ, ಎಂಟು ಸಚಿವರಿಗೆ ಉಸ್ತುವಾರಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಎಂಟು ಸಚಿವರ ಜತೆ ಚರ್ಚೆ ನಡೆಸಿ ಬಳಿಕ ಅವರು ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಎಂಟು ಸಚಿವರು ನಗರದ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಮುಂದಿನ ಹೆಜ್ಜೆ ಇಡಲಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದ ಎಲ್ಲ ಕಡೆಗಳಲ್ಲಿ ಬೇಗನೇ ಪರೀಕ್ಷೆ ಮಾಡಿ, ಬೇಗನೇ ಫಲಿತಾಂಶ ನೀಡಲು ಕ್ರಮ ತೆಗೆದುಕೊ‌ಳ್ಳಲಾಗುವುದು. ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹೈಫ್ಲೊ ಆಕ್ಸಿಜನ್‌ ಅಳವಡಿಸುವುದು ಮತ್ತು ಹೆಚ್ಚಿನ ಹಾಸಿಗೆಗಳ ವ್ಯವಸ್ಥೆ ಮಾಡಲು ತೀರ್ಮಾನಿಸಲಾಯಿತು ಎಂದರು.

ಇದನ್ನೂ ಓದಿ... ಕೊರೊನಾ ನಮ್ಮ ಕೈಮೀರಿದೆ, ನಿಗ್ರಹ ಕಷ್ಟವಾಗುತ್ತಿದೆ: ಸಚಿವ ಜೆ.ಸಿ.ಮಾಧುಸ್ವಾಮಿ

ಗುತ್ತಿಗೆ ವೈದ್ಯರಿಗೆ ಕೃಪಾಂಕ ಹೆಚ್ಚಳ: ಗುತ್ತಿಗೆ ವೈದ್ಯರನ್ನು ಕಾಯಂಗೊಳಿಸುವ ಉದ್ದೇಶದಿಂದ ಕೃಪಾಂಕವನ್ನು 2.5 ರಿಂದ 30 ರವರೆಗೆ ನೀಡಲು ತೀರ್ಮಾನಿಸಲಾಗಿದೆ. 6 ತಿಂಗಳು ಸೇವೆ ಮಾಡಿದವರಿಗೆ 2.5 ಅಂಕ ಸಿಗುತ್ತದೆ. ಸೇವೆಯ ಕಾಲಾವಧಿ ಹೆಚ್ಚಾದಷ್ಟೂ ಕೃಪಾಂಕವೂ ಹೆಚ್ಚುತ್ತದೆ. ವಯೋಮಿತಿಯ ನಿರ್ಬಂಧವನ್ನು 21 ರಿಂದ 26 ವರ್ಷಗಳಿಗೆ ಏರಿಸಲಾಗಿದೆ. ಆಯುಷ್‌ ವೈದ್ಯರಿಗೂ ಇದು ಅನ್ವಯವಾಗುತ್ತದೆ ಎಂದು ಮಾಧುಸ್ವಾಮಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು