ಮಂಗಳವಾರ, ಡಿಸೆಂಬರ್ 10, 2019
26 °C

ಡಿಎಸ್‌ಸಿ ಪ್ರಶಸ್ತಿ ಮೊದಲ ಸುತ್ತಿಗೆ ಜಯಂತ ಕಾಯ್ಕಿಣಿ ಕೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕವಿ ಮತ್ತು ಕತೆಗಾರ ಜಯಂತ ಕಾಯ್ಕಿಣಿಯವರ ‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ ಕಥೆಗಳ ಸಂಕಲನ, ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿ ನೀಡುವ ಡಿಎಸ್‌ಸಿ ಬಹುಮಾನದ ಸ್ಪರ್ಧೆಯಲ್ಲಿ ಮೊದಲ ಸುತ್ತಿಗೆ ಪ್ರವೇಶಿಸಿದೆ.

ಕಾಯ್ಕಿಣಿ ಅವರ ವಿವಿಧ ಕಥಾ ಸಂಕಲನಗಳಲ್ಲಿರುವ ಮುಂಬೈ ಕುರಿತ ಕಥೆಗಳ ಆಯ್ದ ಕೃತಿ ಇದಾಗಿದ್ದು, ತೇಜಸ್ವಿನಿ ನಿರಂಜನ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಇನ್ನು ಎರಡು ಸುತ್ತುಗಳು ಬಾಕಿ ಇದ್ದು, 16 ಕೃತಿಗಳು ಮೊದಲ ಸುತ್ತಿಗೆ ಆಯ್ಕೆಯಾಗಿವೆ. ವಿಜೇತವಾಗುವ ಕೃತಿ ₹18 ಲಕ್ಷ ಬಹುಮಾನ ಗೆಲ್ಲಲಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಜಯಂತ್ ಕಾಯ್ಕಿಣಿ, ‘ಈ ಕೃತಿ ವರ್ಷದ ಆರಂಭದಲ್ಲಿ ಸದ್ದುಗದ್ದಲವಿಲ್ಲದೆ ಮಾರುಕಟ್ಟೆಗೆ ಬಿಡುಗಡೆ ಆಯಿತು. ಇದು ವಿಮರ್ಶಾ ಸ್ಪಂದನವನ್ನೂ ಓದುಗರ ಮನ್ನಣೆಯನ್ನೂ ಪಡೆದಿದೆ. ಹಾರ್ಪರ್‌ ಕೊಲಿನ್ಸ್‌ ಪ್ರಕಾಶನ ಇದರ ಹೊಸ ಆವೃತ್ತಿಯನ್ನು ಪ್ರಕಟಿಸಲು ಸಿದ್ಧತೆ ನಡೆಸಿದೆ. ಡಿಎಸ್‌ಸಿ ಪ್ರಶಸ್ತಿಗೆ ಇನ್ನೂ ಎರಡು ಸುತ್ತುಗಳಿವೆ. ಈಗಲೇ ಏನೂ ಹೇಳಲು ಆಗದು’ ಎಂದು ಹೇಳಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು