ಮಂಗಳವಾರ, ಜೂಲೈ 7, 2020
28 °C
ಜಿಲ್ಲಾಧಿಕಾರಿ ಕ್ಷಮೆಯಾಚನೆ

ಬಳ್ಳಾರಿ | ಸೋಂಕಿತರ ಶವಗಳನ್ನು ಗುಂಡಿಗೆಸೆದ ಸಿಬ್ಬಂದಿ, ವಿಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಕೋವಿಡ್‌–19 ಸೋಂಕಿತರ ಶವಗಳನ್ನು ಗುಂಡಿಗೆ ಎಸೆಯುತ್ತಿದ್ದ ದೃಶ್ಯಗಳ ವಿಡಿಯೊ ಮಂಗಳವಾರ ರಾಜ್ಯದಲ್ಲಿ ವೈರಲ್‌ ಆಗಿತ್ತು. ಗುಗ್ಗರಹಟ್ಟಿ ಪ್ರದೇಶದ ಸ್ಮಶಾನದಲ್ಲಿ ಶವಗಳನ್ನು ಎತ್ತಿ ಒಂದೇ ಗುಂಡಿಗೆ ಎಸೆಯುತ್ತಿದ್ದ ವಿಡಿಯೊ ಬಳ್ಳಾರಿ ಜಿಲ್ಲೆಗೆ ಸೇರಿದೆಯೇ ಎಂದು ಪರಿಶೀಲಿಸುವುದಾಗಿ ಜಿಲ್ಲಾಡಳಿತ ಹೇಳಿತ್ತು.  

1ನಿಮಿಷ 28 ಸೆಕೆಂಡುಗಳ ವಿಡಿಯೊದ ಮೂಲ ಪರಿಶೀಲಿಸಲು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದರು.

‘ವಿಡಿಯೊದಲ್ಲಿರುವ ಘಟನೆ ನಗರದಲ್ಲಿಯೇ ನಡೆದಿದೆ. ಜಿಲ್ಲಾಡಳಿತವು ಮೃತರ ಸಂಬಂಧಿಕರಲ್ಲಿ ಹಾಗೂ ಜನರಲ್ಲಿ ಬೇಷರತ್‌ ಕ್ಷಮೆ ಯಾಚಿಸುತ್ತದೆ’ ಎಂದು ಸಂಜೆ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

‘ಸ್ಮಶಾನದಲ್ಲಿ ಭಾನುವಾರ ಹಾಗೂ ಸೋಮವಾರ ಮೃತಪಟ್ಟ ಒಂಬತ್ತು ಮಂದಿಯ ಶವಸಂಸ್ಕಾರ ಮಾಡಲಾಗಿದೆ. ಶವಗಳನ್ನು ನಿಯಮದ ಪ್ರಕಾರ ಸೋಂಕು ಹರಡದಂತೆ ಸಂಪೂರ್ಣ ಮುಚ್ಚಲಾಗಿತ್ತು. ಆದರೆ ಅವುಗಳನ್ನು ಗುಂಡಿಗೆ ಎಸೆದಿರುವುದು ವಿಷಾದ
ನೀಯ. ‌ಇದನ್ನು ಜಿಲ್ಲಾಡಳಿತ ಖಂಡಿಸುತ್ತದೆ. ಅಗೌರವಯುತವಾಗಿ ಅಂತಿಮ ಸಂಸ್ಕಾರ ನಡೆಸಿದ ತಂಡವನ್ನು ಬದಲಿಸಲಾಗುವುದು. ವಿಮ್ಸ್ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರ ನೇತೃತ್ವದಲ್ಲಿ ತರಬೇತಿ ಪಡೆದವರನ್ನು ತಂಡಕ್ಕೆ ನಿಯೋಜಿಸಲಾಗುವುದು' ಎಂದಿದ್ದಾರೆ. ವಿಡಿಯೊದಲ್ಲೇನಿತ್ತು?: ನೀಲಿ ಬಣ್ಣದ ಪಿಪಿಇ ಕಿಟ್ ಧರಿಸಿದ ಇಬ್ಬರು ಹಾಗೂ ಬಿಳಿಯ ಪಿಪಿಇ ಕಿಟ್ ಧರಿಸಿದ ಇಬ್ಬರು ಸಿಬ್ಬಂದಿ ಗುಂಡಿಯ ಬಳಿ ನಿಂತು ವ್ಯಾನ್ ಕಡೆಗೆ ಹಿಂತಿರುಗುವ ಕ್ಷಣದಿಂದ ವಿಡಿಯೊ ಶುರುವಾಗುತ್ತದೆ. ಮೂರು ಶವಗಳನ್ನು ಅವರು ಒಂದೊಂದಾಗಿ ಎಳೆದು ತಂದು ಗುಂಡಿಗೆ ಎಸೆಯುತ್ತಾರೆ. ಸಮೀಪದಲ್ಲೇ ಇರುವ ವ್ಯಕ್ತಿಯೊಬ್ಬರು ‘ನಿಧಾನಕ್ಕೆ’ ಎನ್ನುತ್ತಾರೆ.

ಸಿಬ್ಬಂದಿಯೊಬ್ಬರು ತಮ್ಮ ಎರಡೂ ಕೈಗಳ ನಾಲ್ಕು ಬೆರಳುಗಳನ್ನು ಪ್ರದರ್ಶಿಸಿ, ‘ಎಂಟವೆ ನೋಡ್ರಪ್ಪ ಟೋಟಲ್ಲು’ ಎನ್ನುತ್ತಾರೆ. ವಿಡಿಯೊ ಚಿತ್ರೀಕರಿಸಿದ ವ್ಯಕ್ತಿ ‘ಹಾಕಂಗುದ್ರೆ ಒಂದ್ರಲ್ಲೇ ಹಾಕ್ಬುಡಿ ಅತ್ತ ಮುಚ್ ಬುಡೋಣ’ ಎನ್ನುತ್ತಾರೆ. ಶವವನ್ನು ಹಳ್ಳಕ್ಕೆ‌ ಬಿರುಸಿನಿಂದ ಸಿಬ್ಬಂದಿ ಬೀಳಿಸಿದಾಗ ‘ಏ ನಿಧಾನಕ್ ಹಾಕ್ರೋ’ ಎಂಬ ಮಾತೂ ಕೇಳುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು