ಭಾನುವಾರ, ಜನವರಿ 26, 2020
27 °C

ಸಿದ್ದರಾಮಯ್ಯರನ್ನು ಸಿಎಂ ಮಾಡದ್ದಕ್ಕೆ ಜೆಡಿಎಸ್ ನೆಲಕಚ್ಚಿದೆ: ಎಸ್.ಎಂ. ಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

S M Krishna

ಬೆಂಗಳೂರು: 2004ರ ಧರ್ಮಸಿಂಗ್ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡದಿದ್ದದ್ದೇ ಪ್ರಾದೇಶಿಕ ಪಕ್ಷ ಜೆಡಿಎಸ್ ನೆಲಕಚ್ಚಲು ಕಾರಣ ಎಂದು ಮಾಜಿ ಕಾಂಗ್ರೆಸಿಗ, ಬಿಜೆಪಿ ಹಿರಿಯ ನಾಯಕ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ. 

ತಮ್ಮ ಆತ್ಮಚರಿತ್ರೆಯಾದ ಸ್ಮೃತಿವಾಹಿನಿಯಲ್ಲಿ ಹೇಳಿರುವಂತೆ, 2004ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಸರ್ಕಾರ ರಚಿಸಿದ್ದವು. ಆಗ ಕಾಂಗ್ರೆಸ್‌ನ ಎನ್. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರು. ಜೆಡಿಎಸ್‌ನಿಂದ ಸಿದ್ದರಾಮಯ್ಯ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. 

ಅಂದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ದೇವೇಗೌಡರು ಮನಸ್ಸು ಮಾಡಲಿಲ್ಲ ಎನ್ನುವ ಅಸಮಾಧಾನವಿತ್ತು. ಈ ಅಂಶವೇ ಜೆಡಿಎಸ್ ನೆಲಕಚ್ಚಲು ಪ್ರಮುಖ ಕಾರಣವಾಯಿತು ಎಂದು ಪುಸ್ತಕದಲ್ಲಿ ಹೇಳಲಾಗಿದೆ.

ದೇವೇಗೌಡರೊಂದಿಗಿನ ತನ್ನ ಒಡನಾಟದ ಹಲವಾರು ಉದಾಹರಣೆಗಳನ್ನು ನೆನಪಿಸಿಕೊಂಡಿರುವ ಕೃಷ್ಣ ಅವರು, “1999ರಲ್ಲಿ ನಾನು ಸಿಎಂ ಆಗಿದ್ದಾಗ, ಗೌಡ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಫೋನ್ ಕರೆಗಳನ್ನು ಮಾಡುತ್ತಿದ್ದರು. ಗೌಡರು ವಿನಂತಿಸಿದ ಎಲ್ಲ ಕಾರ್ಯಗಳನ್ನು ನೋಡಿಕೊಳ್ಳುವಂತೆ ನನ್ನ ಕಾರ್ಯದರ್ಶಿ ಎಂ.ಕೆ. ಶಂಕರ್‌ಲಿಂಗೇ ಗೌಡ ಅವರಿಗೆ ನಾನು ಸೂಚನೆಗಳನ್ನು ನೀಡಿದ್ದೆ. ಆದರೆ ನಮ್ಮಿಬ್ಬರ ನಡುವೆ ಯಾವುದೇ ಬಾಂಧವ್ಯ ಬೆಳೆಯಲಿಲ್ಲ. ಆದಾಗ್ಯೂ, ನಾನು ಕೂಡ ಅವರನ್ನು ದೂಷಿಸುತ್ತೇನೆ. ಮೇಜಿನ ಮೇಲೆ ನಾನು ಮತ್ತು ಅವರು ಕುಳಿತು ಮಾತನಾಡಬೇಕು ಎಂದುಕೊಳ್ಳುತ್ತೇನೆ. ಆದರೆ ಅಂತಹ ಅವಕಾಶ ನನಗೆ ಲಭ್ಯವಾಗಲಿಲ್ಲ ಎಂದು ಹೇಳಿದ್ದಾರೆ. 

ದೇವೇಗೌಡರು ಕಾಂಗ್ರೆಸ್ ಸೇರುವ ಸಾಧ್ಯತೆಯನ್ನು ಪರಿಶೋಧಿಸಿದ ಸಂದರ್ಭಗಳ ಬಗ್ಗೆಯೂ ಮಾಜಿ ಕೇಂದ್ರ ಸಚಿವರು ಬೆಳಕು ಚೆಲ್ಲುತ್ತಾರೆ. ಜನತಾ ಪಾರ್ಟಿಯ ಚರಣ್ ಸಿಂಗ್ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. ಆ ವೇಳೆ ಪಕ್ಷದ ಸದಸ್ಯರಿಗೆ ಮುಂದಿನ ದಾರಿಯ ಸುಳಿವಿರಲಿಲ್ಲ. ಈ ವೇಳೆ ಕಾಂಗ್ರೆಸ್ ಸೇರುವಂತೆ ನಾನು ಅವರನ್ನು ಪ್ರೇರೆಪಿಸಿದಾಗ, ದೇವೇಗೌಡ ಮತ್ತು ಎಸ್.ಆರ್. ಬೊಮ್ಮಾಯಿ ಅವರು ಆ ಬಗ್ಗೆ ಯೋಚಿಸುವುದಾಗಿ ತಿಳಿಸಿದ್ದರು. ಪ್ರಣಬ್ ಮುಖರ್ಜಿ ಅವರೊಂದಿಗೆ ಸಭೆ ಆಯೋಜಿಸಲಾಗಿತ್ತು. ಆದರೆ ಅವರ ಮನಸ್ಸಿನಲ್ಲಿ ಸ್ಪಷ್ಟವಾದ ಬದಲಾವಣೆ ಕಂಡುಬಂದ ಕಾರಣ ಅವರ ತಮ್ಮ ನಿರ್ಧಾರವನ್ನು ಪ್ರಕಟಿಸಲಿಲ್ಲ ಎಂದಿದ್ದಾರೆ. 

ತಮ್ಮ ಬಾಲ್ಯದ ನೆನಪುಗಳ ಬಗ್ಗೆ ಮಾತನಾಡಿರುವುದಷ್ಟೇ ಅಲ್ಲದೆ ಕಾಂಗ್ರೆಸ್‌ನ ಹಿರಿಯ ನಾಯಕರು ಮತ್ತು ಪಕ್ಷದ ಕೊಡುಗೆಗಳ ಕುರಿತು ಮಾತನಾಡಿದ್ದಾರೆ. ಕೆಲವೊಮ್ಮೆ ಅವಕಾಶಗಳನ್ನು ಕಳೆದುಕೊಳ್ಳುವ ಪ್ರಜ್ಞೆಯ ಹೊರತಾಗಿಯೂ, ಕಾಂಗ್ರೆಸ್ ಪಕ್ಷವು ತನ್ನ ಮನೆ ಎಂದೇ ಯಾವಾಗಲೂ ಭಾವಿಸಿದ್ದೆ ಎಂದು ಅವರು ಹೇಳಿದ್ದಾರೆ.

ಈ ಮೊದಲು ಭಾರತವನ್ನು ಬಡ ದೇಶವೆಂದು ನೋಡಲಾಗುತ್ತಿತ್ತು. ಆದರೆ ಇಂದು ದೇಶದ ಹಳ್ಳಿಗಳು ಅಭಿವೃದ್ಧಿಗೊಂಡಿವೆ. ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಲು ದೇಶವು ಪ್ರಯತ್ನಗಳನ್ನು ಮಾಡಿದೆ. ಹಲವು ನ್ಯೂನತೆಗಳಿದ್ದರೂ ಕೂಡ ಈ ಯಶಸ್ಸನ್ನು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಿಸುವುದು ಅತಿಶಯೋಕ್ತಿಯೇನಲ್ಲ ಎಂದು ಹೇಳಿದ್ದಾರೆ. 

ಸ್ಮೃತಿ ವಾಹಿನಿ ಪುಸ್ತಕವು ಪಾವಗಡ ಪ್ರಕಾಶ್ ರಾವ್ ಅವರು ಕೃಷ್ಣಾ ಅವರೊಂದಿಗೆ ನಡೆದ ಸಂದರ್ಶನಗಳ ಭಾಗವಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು