ಬೆಂಗಳೂರು: ರಾಜ್ಯದಲ್ಲಿರುವ ನಕಲಿ ವೈದ್ಯರ ವಿಷವರ್ತುಲ ಕುರಿತಂತೆ ‘ಪ್ರಜಾವಾಣಿ’ಯ ಭಾನುವಾರ (ಮೇ 12) ಸಂಚಿಕೆಯಲ್ಲಿ ಪ್ರಕಟವಾದ ‘ಒಳನೋಟ’ ಸಮಗ್ರ ವರದಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

‘ಸುಲಿಗೆ ಮಾಡುವ ತಂತ್ರ’

ಜನರು ತಮ್ಮ ಆರೋಗ್ಯ ಉತ್ತಮಪಡಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ನಕಲಿ ವೈದ್ಯರ ಕ್ಲಿನಿಕ್‌ಗಳು ಬಡಜನರ ಬರುವಿಕೆಗಾಗಿ ಕಾದಿರುತ್ತವೆ. ಇರುವ ಆರೋಗ್ಯ ಸಮಸ್ಯೆ ಬಗೆಹರಿಸದೇ ಇಲ್ಲಸಲ್ಲದ ಚಿಕಿತ್ಸೆ ನೀಡಿ ಜನರ ಕಣ್ಣಿಗೆ ಮಣ್ಣೆರಚುತ್ತಾರೆ. ಆರೋಗ್ಯಕ್ಕಾಗಿ ಸಾಲದ ಕೂಪದಲ್ಲಿ ಸಿಲುಕಿ ಹಣ ಪಾವತಿ ಮಾಡುತ್ತಾರೆ. ಸರ್ಕಾರಗಳು ಈ ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳಬೇಕು.

ಎನ್. ಪುನೀತ್,ಮೈಸೂರು

‘ಕಠಿಣ ಕಾನೂನು ಅಗತ್ಯ’

ಜೀವ ಉಳಿಸುವ ವೈದ್ಯರನ್ನು ದೇವರ ಸ್ಥಾನದಲ್ಲಿ ಕಾಣುವ ಮನೋಭಾವ ನಮ್ಮದು. ಅಂತಹ ವೈದ್ಯರು ನಕಲಿ ಮುಖವಾಡ ಹಾಕಿ ರೋಗಿಗಳ ಮೇಲೆ ಯಮನಾಗಿ ಎರಗುತ್ತಿದಾರೆ. ಇದಕ್ಕೆ ಬಲಿಯಾಗುವವರು ಮುಗ್ಧರು, ಬಡವರು, ಕೂಲಿ ಕಾರ್ಮಿಕರು. ಹೀಗಾಗಿ, ನಕಲಿ ವೈದ್ಯರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಬೇಕು.

ನಕಲಿ ವೈದ್ಯರ ಬಲೆಗೆ ಗ್ರಾಮೀಣ ಭಾಗದವರು ಹೆಚ್ಚಾಗಿ ಬೀಳುತ್ತಾರೆ. ಗ್ರಾಮಗಳಲ್ಲಿ ಆರೋಗ್ಯ ಕೇಂದ್ರಗಳ ಕೊರತೆ ಇದ್ದು, ಚಿಕಿತ್ಸೆಗಾಗಿ ಕ್ಲಿನಿಕ್‌ಗಳತ್ತ ಹೋಗುತ್ತಾರೆ. ಎಲ್ಲ ಗ್ರಾಮಗಳಲ್ಲಿ ಬೆಳಿಗ್ಗೆ ಅಥವಾ ಸಂಜೆ ವೇಳೆ ಒಂದು ನಿಗದಿತ ಕಾಲದಲ್ಲಿ ಸೇವೆ ಸಲ್ಲಿಸಲುವೈದ್ಯರನ್ನು ನಿಯೋಜಿಸಬೇಕು

ಎಚ್.ಕೆ. ಸಂತೋಷ್ ಕುಮಾರ್,ಬಳ್ಳಾರಿ

‘ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಯಾಗಲಿ’

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸಾ ಪರಿಕರಗಳು ಇಲ್ಲದ ಕಾರಣ ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡಲು ವಿಫಲವಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿದರೆ ನಕಲಿ ವೈದ್ಯರ ಹಾವಳಿಗೆ ತಡೆ ನೀಡಬಹುದು.

ವೈ.ಯೋಗೇಂದ್ರ, ಮುತ್ತೂರು

‘ಖಾಲಿ ಹುದ್ದೆ ಭರ್ತಿಯಾಗಬೇಕು’

ಸರ್ಕಾರಿ ವೈದ್ಯರ ಹುದ್ದೆಗಳುಹುದ್ದೆಗಳು ಖಾಲಿ ಇರುವುದರಿಂದ ಖಾಸಗಿ ಕ್ಲಿನಿಕ್‌ಗಳು ತಲೆ ಎತ್ತಿವೆ. ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ತಕ್ಕಮಟ್ಟಿನ ಸೇವೆ ಒದಗಿಸುತ್ತಿಲ್ಲ. ನಕಲಿ ವೈದ್ಯರು ನೀಡುವ ಔಷಧಿಗೂ ಆರೋಗ್ಯ ಸಮಸ್ಯೆಗೂ ಸಂಬಂಧವಿರುವುದಿಲ್ಲ. ಇಂಥವರಿಂದ ಜನರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ.

ಮಲ್ಲಿಕಾರ್ಜುನ ಕಡಕೋಳ, ದಾವಣಗೆರೆ

‘ಯೋಜನೆ ಜನರಿಗೆ ಮುಟ್ಟಲಿ’

ಬಡವರಿಗೆ ಆರೋಗ್ಯ ಎನ್ನುವುದು ಗಗನಕುಸುಮವಾಗಿದೆ. ಆರೋಗ್ಯ ಸುಧಾರಣೆಗಾಗಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಅಧಿಕಾರಿಗಳುಅದರ ಲಾಭ ಪಡೆದುಕೊಳ್ಳುತ್ತಾರೆ. ಸರ್ಕಾರ ಒದಗಿಸಿರುವ ಆಂಬುಲೆನ್ಸ್ ಸೇವೆ ಸಮರ್ಪಕವಾಗಿಲ್ಲ. ಇಲಾಖೆ ಅಧಿಕಾರಿಗಳು ಕೇವಲ ಕಾರ್ಯಕ್ರಮಗಳಿಗೆ ಹಾಜರಾಗದೆ ಆಗಾಗ ಆಸ್ಪತ್ರೆಗಳ ತಪಾಸಣೆ ಮಾಡಬೇಕು.

ನಾಗರಾಜ ಎಮ್, ಗದಗ

‘ನಕಲಿ ವೈದ್ಯರನ್ನು ಬಂಧಿಸಿ’

ಮುಗ್ಧ ಜನರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ನಕಲಿ ವೈದ್ಯರು ಜನರ ಬದುಕಿನ ಜೊತೆ ಆಟ ಆಡುತ್ತಿದ್ದಾರೆ. ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆ ದಾಳಿ ಮಾಡಬೇಕು. ಬಳಿಕ ಕಾರಾಗೃಹಕ್ಕೆ ತಳ್ಳಬೇಕು. ಎಲ್ಲ ಕ್ಲಿನಿಕ್‌ಗಳಿಗೂ ಅಧಿಕೃತವಾದ ಪರವಾನಗಿ ಇರುವುದನ್ನು ರೋಗಿಗಳಿಗೆ ತಿಳಿಯುವಂತೆ ಪ್ರಕಟಿಸಬೇಕು.

ಪ್ರವೀಣ್ ಇಂದ್ರಜಿತ್, ಕಿತ್ತೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.