ಬೆಳಗಾವಿ: ‘ಮಹಾರಾಷ್ಟ್ರ ಸಾಹಿತಿಗಳನ್ನು ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಕೊಡದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ನಾಲಾಯಕ್ ಸರ್ಕಾರವಾಗಿದೆ. ಸಾಹಿತಿಗಳ ದನಿ ಹತ್ತಿಕ್ಕುವ ಕೆಲಸ ಇಲ್ಲಿ ನಡೆದಿದೆ’ ಎಂದು ಮರಾಠಿ ಸಾಹಿತಿ ಡಾ.ಶ್ರೀಪಾಲ್ ಸಬ್ನೀಸ್ ಆರೋಪಿಸಿದ್ದಾರೆ.

ಖಾನಾಪುರ ತಾಲ್ಲೂಕು ಇದ್ದಲಹೊಂಡದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮರಾಠಿ ಸದ್ಭಾವನಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅವರನ್ನು ಗಡಿ ವಿವಾದದ ಹಿನ್ನೆಲೆಯಲ್ಲಿ ಪಾಲ್ಗೊಳ್ಳದಂತೆ ತಡೆದಿದ್ದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಾನೂನು ಸುವ್ಯವಸ್ಥೆ ನೆಪವಿಟ್ಟುಕೊಂಡು, ಬೆಳಗಾವಿ ಪೊಲೀಸರು ಮಹಾರಾಷ್ಟ್ರದ ಅನೇಕ ಸಾಹಿತಿಗಳನ್ನು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಟ್ಟಿಲ್ಲ. ಬೆಳಗಾವಿಯಲ್ಲೇ ತಡೆದಿದ್ದಾರೆ. ಕರ್ನಾಟಕದ ಸರ್ಕಾರದ ತಲೆ ಕೆಟ್ಟು ಹೋಗಿದೆ. ಹೊಸ ಹಿಟ್ಲರ್ ಜಾಗೃತಗೊಂಡಿದ್ದಾನೆ. ಸಮ್ಮೇಳನ ನಡೆಯದಂತೆ ಪೊಲೀಸರ ಮೂಲಕ ಯತ್ನಿಸಿದ್ದಾರೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಷಯಕ್ಕೂ ಕಡಿವಾಣ ಹಾಕುತ್ತಿರುವುದು ಖಂಡನೀಯ’ ಎಂದು ದೂರಿದ್ದಾರೆ. ಬೆಳಗಾವಿಯಲ್ಲಿ ಮರಾಠಿ ಪತ್ರಕರ್ತರನ್ನು ಆಹ್ವಾನಿಸಿ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

‘ಈ ಸರ್ಕಾರದ ವಿರುದ್ಧ ಸಂವಿಧಾನದ ಹತ್ಯೆಗಾಗಿ ಕೇಂದ್ರ ದೂರು ದಾಖಲಿಸಬೇಕು. ಇಲ್ಲಿ ಜನಿಸಿದ ವಿಶ್ವಗುರು ಬಸವಣ್ಣ ಹಾಗೂ ಸಂತ ಕನಕದಾಸರ ಹೆಸರಿಗೆ ಸರ್ಕಾರ ಕಳಂಕ ತರುತ್ತಿದೆ’ ಎಂದು ದೂರಿದ್ದಾರೆ.

‘ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಈ ಭಾಗ ಭಾರತ ಹಾಗೂ ಪಾಕಿಸ್ತಾನದ ಗಡಿ ಅಲ್ಲ. ಕನ್ನಡ-ಮರಾಠಿಗರ ನಡುವಿನ ಗಡಿ ಇದೆ. ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳನ್ನು ನಡೆಸಲು ಕುಮ್ಮಕ್ಕು ನೀಡುತ್ತಿರುವ, ಕರ್ನಾಟಕ ಸರ್ಕಾರ ಹಿಂಸಾತ್ಮಕ ಹೋರಾಟವಾಗಲೆಂಬ ಉದ್ದೇಶದಿಂದ ನೀಚ ಬುದ್ಧಿ ತೋರಿಸಿದೆ. ಕನ್ನಡ-ಮರಾಠಿಗರ ನಡುವಿನ ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಟೀಕಿಸಿದ್ದಾರೆ.

‘ಗಡಿ ಹೋರಾಟದಲ್ಲಿ 105 ಮಂದಿ ಹುತಾತ್ಮರಾಗಿದ್ದಾರೆ. ಆದರೆ ಇನ್ನೂ ಬೆಳಗಾವಿ, ನಿಪ್ಪಾಣಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರ್ಪಡೆ ಆಗಿಲ್ಲ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ವಿವಾದವನ್ನು ಸುಪ್ರೀಂ ಕೋರ್ಟ್ ಕೂಡಲೇ ಬಗೆಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಗಡಿ ವಿಷಯದಲ್ಲಿ ಉತ್ತಮ ನಿರ್ಣಯ ತೆಗೆದುಕೊಂಡಿದ್ದಾರೆ. ಹೀಗಾಗಿ, ಕರ್ನಾಟಕದಲ್ಲಿ ನಿಂತು ಅವರನ್ನು ಅಭಿನಂದಿಸುವುದಕ್ಕೆ ಹೆಮ್ಮೆಯಾಗುತ್ತಿದೆ’ ಎಂದು ಬೀಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.