ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು - ಬೆಳಗಾವಿ ಸೂಪರ್ ಫಾಸ್ಟ್ ರೈಲಿನಲ್ಲಿ ಪ್ರಯಾಣಿಕರಿಗೆ ದೂಳಿನ ಸ್ನಾನ

Last Updated 27 ಮೇ 2020, 14:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಂಗಳೂರು- ಬೆಳಗಾವಿ ನಡುವಿನ ಸೂಪರ್ ಫಾಸ್ಟ್ ರೈಲಿನಲ್ಲಿ ಬುಧವಾರ ಸಂಚರಿಸಿದ ಪ್ರಯಾಣಿಕರು ದೂಳಿನ ಸ್ನಾನ ಮಾಡಬೇಕಾಯಿತು.
ರೈಲು ಸೂಪರ್ ಫಾಸ್ಟ್ ಆಗಿ ಓಡಲು ಆರಂಭ ವಾಗುತ್ತಿದ್ದಂತೆಯೇ ಎಂಜಿನ್ ನಿಂದ ಬಿಳಿ ದೂಳಿನ ಕಣಗಳು ಆರಂಭಿಕ ಮೂರು ಬೋಗಿಗಳನ್ನು ತುಂಬಿಕೊಳ್ಳುತ್ತಿದ್ದವು. ಪ್ರಯಾಣಿಕರು ಮಾಸ್ಕ್ ಧರಿಸಿದ್ದರಿಂದ ಬಚಾವು. ಆದರೆ ಕಣ್ಣು ಬಿಡಲು ಸಾಧ್ಯವಾಗುತ್ತಿರಲಿಲ್ಲ. ದೂಳು ಎಲ್ಲರ ಮೇಲೂ ಆವರಿಸಿ ಕೊಳ್ಳುತ್ತಿತ್ತು.

ಪ್ರಯಾಣಿಕರು ಗೊಣಗಿಕೊಂಡು ತಲೆ, ಬಟ್ಟೆ ಹಾಗೂ ತಮ್ಮ ಲಗೇಜ್‌ಗಳ ಮೇಲಿದ್ದ ದೂಳನ್ನು ಕೊಡವಿಕೊಂಡು ಪ್ರಯಾಣ ಮಾಡಿದರು. ಕೇಳಲು ಟಿ. ಟಿ ಗಳು ಇರಲಿಲ್ಲ.
ದಾವಣಗೆರೆಯಿಂದ ಹಾವೇರಿ ನಡುವಿನ ಪ್ರಯಾಣ ಅವಧಿಯಲ್ಲಿ ನಾಲ್ಕೈದು ಬಾರಿ ದೂಳಿನ ಸ್ನಾನವಾಯಿತು ಎಂದು ಪ್ರಯಾಣಿಕ ಪ್ರಶಾಂತ್ ' ಪ್ರಜಾವಾಣಿ'ಗೆ ತಿಳಿಸಿದರು.
ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಪ್ರಯಾಣಿಕರಿಗೆ ಅನುಕೂಲವಾಗಲು ರಾಜ್ಯ ಸರ್ಕಾರದ ಮನವಿ ಮೇರೆಗೆ ನೈರುತ್ಯ ರೈಲು ಇಲಾಖೆ ಬೆಂಗಳೂರು ಮತ್ತು ಬೆಳಗಾವಿ ನಡುವೆ ಸೂಪರ್ ಫಾಸ್ಟ್ ರೈಲನ್ನು ಓಡಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT