ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳಿಗೆ ಮೇಲ್ಸೇತುವೆ

ಸಮಸ್ಯೆ ಪರಿಹಾರಕ್ಕೆ ಮುಂದಾದ ಅರಣ್ಯ ಇಲಾಖೆ
Last Updated 7 ಆಗಸ್ಟ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು–ಕೊಳ್ಳೆಗಾಲ ಹೆದ್ದಾರಿಯಲ್ಲಿ ಆನೆಗಳು ಎದುರಿಸುತ್ತಿದ್ದಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ. ವನ್ಯಜೀವಿಗಳಿಗಾಗಿಯೇ ಪ್ರತ್ಯೇಕ ಮೇಲ್ಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ.

ಉತ್ತರಹಳ್ಳಿ–ಮನವಾರ್ತೆ ಕಾವಲ್ ಬಳಿಯ ಮುಖ್ಯ ರಸ್ತೆಯನ್ನು ವಿಸ್ತರಿಸುವ ಪ್ರಸ್ತಾವವಿದೆ. ಈ ವೇಳೆ ಆನೆಗಳು ಹಾದು ಹೋಗುವುದಕ್ಕೆಂದೇ ಮುಖ್ಯ ರಸ್ತೆಗೆ ಅಡ್ಡವಾಗಿ 30ಮೀಟರ್‌ನಿಂದ 70 ಮೀ ಅಗಲದ ಮೇಲ್ಸೇತುವೆ ನಿರ್ಮಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ರಾಷ್ಟ್ರೀಯ ಹೆದ್ದಾರಿ–209 ಅನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವವನ್ನು ಹೊಂದಿದೆ. 131 ಕಿ.ಮೀ. ಉದ್ದದ ಈ ಹೆದ್ದಾರಿಯ 38 ಕಿ.ಮೀ. ಉದ್ದದ ರಸ್ತೆ ಯು.ಎಂ.ಕಾವಲ್‌ ಮೂಲಕ ಹಾದುಹೋಗುತ್ತದೆ. ಇಲ್ಲಿ ಈಗಿರುವ ರಸ್ತೆಗೆ ಇನ್ನೂ ಎರಡು ಪಥಗಳನ್ನು ಸೇರ್ಪಡೆ ಮಾಡಲಾಗುತ್ತದೆ.

ಈ ಪ್ರಸ್ತಾವಕ್ಕೆ ಮಂಜೂರಾತಿ ನೀಡುವ ಸಲುವಾಗಿ ನಡೆದ ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ಸಂಜಯ್ ಮೋಹನ್ ಅವರು ಆನೆಗಳಿಗಾಗಿಯೇ ಪ್ರತ್ಯೇಕ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾವವನ್ನು ಎನ್‌ಎಚ್‌ಎಐ ಮುಂದಿಟ್ಟಿದ್ದಾರೆ. ‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಸಾವನದುರ್ಗ ಕಾಯ್ದಿರಿಸಿದ ಅರಣ್ಯ ಪ್ರದೇಶಕ್ಕೆ ತೆರಳಲು ಆನೆಗಳಿಗೆ ಮೇಲ್ಸೇತುವೆ ಅತ್ಯಗತ್ಯ’ ಎಂದು ಹೇಳಿದ್ದಾರೆ.

‘ಈ ಮೇಲ್ಸೇತುವೆಗಳು ಸಾಮಾನ್ಯ ಮೇಲ್ಸೇತುವೆಗಳಿಗಿಂತ ಅಗಲವಾಗಿರುತ್ತವೆ. ಅದರ ಮೇಲೆ ಆನೆಗಳ ಆವಾಸ ವನ್ನು ಹೋಲುವಂತೆ ಹುಲ್ಲುಹಾಸು ಹಾಗೂ ಗಿಡಗಂಟಿಗಳನ್ನು ಬೆಳೆಸಲಾಗುತ್ತದೆ’ ಎಂದು ಸಂಜಯ್‌ ತಿಳಿಸಿದರು.

‘ಆನೆಗಳು ಮೇಲ್ಸೇತುವೆ ಮೂಲ ಕವೇ ಹಾದುಹೋಗುವಂತೆ ಮಾಡಲು ರಸ್ತೆಯ ಅಕ್ಕಪಕ್ಕದಲ್ಲಿ ಬ್ಯಾರಿಕೇಡ್ ಹಾಕ ಲಾಗುತ್ತದೆ. ಅವುಗಳು ಹೊಸ ಮಾರ್ಗಕ್ಕೆ ಹೊಂದಿಕೊಳ್ಳಲು ಕೆಲ ದಿನಗಳು ಬೇಕಾಗುತ್ತವೆ. ಒಮ್ಮೆ ಹೊಂದಿಕೊಂಡರೆ ಬಳಿಕ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಐದು ವರ್ಷಗಳ ಹಿಂದೆಯೇ ಈ ರೀತಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

‘ಮೇಲ್ಸೇತುವೆ ನಿರ್ಮಾಣ ಅತ್ಯುತ್ತಮ ಪರಿಹಾರವೇನಲ್ಲ. ಆದರೆ, ಹೆದ್ದಾರಿ ವಿಸ್ತರಣೆ ಮಾಡುವ ಕಡೆಗಳಲ್ಲಿ ಇದರ ಅಗತ್ಯ ಇದೆ. ಈ ಹಿಂದೆ ನಾವು ಇದಕ್ಕೆ ಒತ್ತಾಯಿಸುತ್ತಿರಲಿಲ್ಲ. ಈಗ ಇದೂ ಕೂಡಾ ವನ್ಯಜೀವಿ ಸಂರಕ್ಷಣೆಯ ನಮ್ಮ ಪ್ರಯತ್ನದ ಪ್ರಮುಖ ಅಂಶ’ ಎಂದರು.

ಎನ್‌ಎಚ್‌ಎಐ ವ್ಯವಸ್ಥಾಪಕ ನಿರ್ದೇಶಕ (ತಾಂತ್ರಿಕ) ಬಿ.ಟಿ. ಶ್ರೀಧರ್, ‘ಅರಣ್ಯ ಅಧಿಕಾರಿಗಳಿಂದ ಮುಂದಿನ ಹಂತದಲ್ಲಿ ಅನುಮೋದನೆ ಪಡೆದ ಬಳಿಕ ಆನೆಗಳು ಸಾಗಲು ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಈ ಕಾಮಗಾರಿ ಆರಂಭವಾಗುವುದಕ್ಕೆ ಇನ್ನೂ ಆರು ತಿಂಗಳು ಬೇಕಾಗಬಹುದು’ ಎಂದು ಮಾಹಿತಿ ನೀಡಿದರು.

ಅರಣ್ಯ ಪ್ರದೇಶದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಭಾರತೀಯ ವನ್ಯಜೀವಿ ಸಂಸ್ಥೆಯ ಮಾರ್ಗಸೂಚಿಯನ್ನು ಅನುಸರಿಸು ವಂತೆಎನ್‌ಎಚ್‌ಎಐ ಇತ್ತೀಚೆಗೆ ಯೋಜನೆ ಅನುಷ್ಠಾನದ ವಿಭಾಗಕ್ಕೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT