ಬೆಂಗಳೂರು: ರಾಜ್ಯದ 37.27 ಲಕ್ಷ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಎರಡನೇ ಜೊತೆ ಸಮವಸ್ತ್ರದ ‘ಭಾಗ್ಯ’ಕ್ಕೆ ಕತ್ತರಿ ಹಾಕಿರುವ ಶಿಕ್ಷಣ ಇಲಾಖೆ ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದೆ.

ಕೇಂದ್ರ ಸರ್ಕಾರ ಶಿಕ್ಷಣ ಇಲಾಖೆಗೆ ಹಣ ಬಿಡುಗಡೆ ಮಾಡದ ಕಾರಣ ಎರಡನೇ ಜೊತೆ ಸಮವಸ್ತ್ರ ವಿತರಿಸಲು ಆಗಿಲ್ಲ ಎಂದು ಸಬೂಬು ಹೇಳಿದೆ. ಆದರೆ, ‘ಪ್ರಜಾವಾಣಿ’ಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಕೇಂದ್ರ ಸರ್ಕಾರ 2018–19 ನೇ ಸಾಲಿನಲ್ಲಿ ‘ಸಮಗ್ರ ಶಿಕ್ಷಣ ಯೋಜನೆ’ಗಾಗಿ ಒಟ್ಟಾರೆ ₹577.84 ಕೋಟಿ ಬಿಡುಗಡೆ ಮಾಡಿದೆ.

ಪ್ರತಿ ವರ್ಷವೂ ಜೂನ್– ಜುಲೈನಲ್ಲೇ ಎರಡನೇ ಜೊತೆ ಸಮವಸ್ತ್ರವನ್ನು ವಿತರಿಸಲಾಗುತ್ತಿತ್ತು. ಕಳೆದ ಆಗಸ್ಟ್ 30 ರಂದು ರಾಜ್ಯ ಸರ್ಕಾರ ಎರಡನೇ ಜೊತೆ ಸಮವಸ್ತ್ರವನ್ನು ಪೂರೈಕೆ ಮಾಡುವ ಸಂಬಂಧ ಸರ್ಕಾರಿ ಆದೇಶವೇನೊ ಹೊರಡಿಸಿದೆ. ಆದರೆ, ಈವರೆಗೂ ಆದೇಶ ಕಾರ್ಯಗತವಾಗಿಲ್ಲ.

ಪ್ರತಿ ವರ್ಷ ಎಸ್ಡಿಎಂಸಿ ಮೂಲಕ ಸಮವಸ್ತ್ರ ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. ಆದರೆ, ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ಎಸ್ಡಿಎಂಸಿಗೆ ನೀಡದೇ ಟೆಂಡರ್ ಮೂಲಕ ಮಹಾರಾಷ್ಟ್ರದ ಕೆಲವು ಖಾಸಗಿ ಕಂಪನಿಗಳಿಗೆ ಸಮವಸ್ತ್ರ ತಯಾರಿಕೆ ಗುತ್ತಿಗೆ ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದರು. ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಪ್ರಯತ್ನ ಕೈ ಬಿಟ್ಟಿತ್ತು.

ಹೊಟ್ಟೆ ಮೇಲೆ ತಣ್ಣೀರು ಬಟ್ಟೆ: ‘ಎರಡನೇ ಜೊತೆ ಸಮವಸ್ತ್ರ ವಿತರಿಸಲು ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಇದು ವಾಸ್ತವಕ್ಕೆ ದೂರ ಸಂಗತಿ. ಈ ಮೂಲಕ ಅವರು ಸುಮಾರು 20 ರಿಂದ 25 ಸಾವಿರ ಬಡ ದರ್ಜಿಗಳ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತೆ ಮಾಡಿದ್ದಾರೆ’ ಎಂದು ಟೇಲರ್ಗಳ ಹೋರಾಟ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ಇಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎಸ್.ಡಿ.ಎಂ.ಸಿಗಳ ಮೂಲಕ ಸಮವಸ್ತ್ರಗಳ ಪೂರೈಕೆ ಅವಕಾಶ ಕೊಟ್ಟರೆ ಅಧಿಕಾರಿಗಳಿಗೆ ಒಂದು ಪೈಸೆಯೂ ಕಮಿಷನ್ ಸಿಗುವುದಿಲ್ಲ. ಹೊರ ರಾಜ್ಯಗಳ ಕಂಪನಿಗಳಿಗೆ ಗುತ್ತಿಗೆ ನೀಡಿದರೆ, ಕಮಿಷನ್ ಸಿಗುತ್ತದೆ ಎಂಬುದು ಅಧಿಕಾರಿಗಳ ಉದ್ದೇಶ. ಆದ್ದರಿಂದ, ಅವರು ಹೊರ ರಾಜ್ಯಗಳ ಕಂಪನಿಗಳಿಗೆ ಗುತ್ತಿಗೆ ನೀಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ಕೇಂದ್ರದಿಂದ ಬಿಡುಗಡೆಯಾದ ಹಣ (ಸರ್ವ ಶಿಕ್ಷಾ ಅಭಿಯಾನ)

ವರ್ಷ ಅನುಮೋದನೆ ಕೇಂದ್ರದ ಪಾಲು ಬಿಡುಗಡೆಗೊಂಡಿದ್ದು ಶೇಕಡಾವಾರು

2015–16 1545 927 417 ಶೇ45

2016–17 1878 1127 544 ಶೇ 48

2017–18 1809 1085 548 ಶೇ50

2018–19 1679 1007 577 ಶೇ57

(ಹಣದ ಮೊತ್ತ ₹ ಕೋಟಿಗಳಲ್ಲಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.