ಶುಕ್ರವಾರ, ಏಪ್ರಿಲ್ 23, 2021
27 °C

ಇದು ನೀವು ಕಟ್ಟಿದ ಪಕ್ಷ,ನೀವೇ ಹೊರಗೆ ಹೋದರೆ ಹೇಗೆ: ಎಂಟಿಬಿಗೆ ಪರಮೇಶ್ವರ್ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಎಂಟಿಬಿ ನಾಗರಾಜ್ ಅವರ ಹಲವು ಕಾರಣಗಳಿಂದ ರಾಜೀನಾಮೆ ಕೊಟ್ಟಿದ್ದಾರೆ. ಅವರ ಮನವೊಲಿಸಲು ಡಿಕೆ.ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರು ಸತತ ಪ್ರಯತ್ನ ಮಾಡಿದ್ದಾರೆ 45 ವರ್ಷಗಳಿಂದ ಹೊಸಕೋಟೆ ಭಾಗದಲ್ಲಿ ಪಕ್ಷವನ್ನು ಕಟ್ಟಿರುವ ಎಂಟಿಬಿ ರಾಜೀನಾಮೆ ಕೊಟ್ಟಿದ್ದು ಸರಿಕಾಣಲಿಲ್ಲ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

‘ಅವರ ಅಭಿಪ್ರಾಯಗಳಿಗೆ ಸ್ಪಂದಿಸುತ್ತೇವೆ. ಬೇಡಿಕೆಗಳನ್ನು ಈಡೇರಿಸುವ ಭರವಸೆ ಕೊಟ್ಟಿದ್ದೇವೆ. ಶಾಸಕ ಮತ್ತು ಸಚಿವ ಸ್ಥಾನಕ್ಕೆ ಕೊಟ್ಟಿರುವ ರಾಜೀನಾಮೆಯನ್ನು ಅವರು ತಕ್ಷಣ ಹಿಂಪಡೆಯಬೇಕು ಎಂದು ಮನವಿ ಮಾಡಿದ್ದೇವೆ. ನಮ್ಮಿಂದ ಮುಂದೆ ಇಂಥ ತಪ್ಪುಗಳು ಆಗುವುದಿಲ್ಲ ಆಗುವುದಿಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ಪರಮೇಶ್ವರ ನುಡಿದರು.

‘ಎಂಟಿಬಿ ಬೇಡಿಕೆಗಳಿಗೆ ಮುಖ್ಯಮಂತ್ರಿಯೂ ಸ್ಪಂದಿಸುತ್ತಾರೆ. ಸುಧಾಕರ ಅವರ ಮನವೊಲಿಸಿ. ಪಕ್ಷಕ್ಕೆ ಒಳಿತಾಗುವ ತೀರ್ಮಾನ ತೆಗೆದುಕೊಳ್ಳುವ ಭರವಸೆಯನ್ನು ಎಂಟಿಬಿ ನೀಡಿದ್ದಾರೆ. ಇದು ಅವರೇ ಕಟ್ಟಿದ ಪಕ್ಷ, ಕಾಂಗ್ರೆಸ್ ತೊಂದರೆಗೆ ಸಿಲುಕುವುದ ಬೇಡ. ಪಕ್ಷ ಎಲ್ಲರಿಗಿಂತಲೂ ದೊಡ್ಡದು. ಎಂಟಿಬಿ ನಮ್ಮ ಮನವಿಗೆ ಒಪ್ಪಿದ್ದಾರೆ. ಮುಂದೆ ಒಳ್ಳೇ ತೀರ್ಮಾನ ತಗೊಳ್ತಾರೆ’ ಎಂದು ಪರಮೇಶ್ವರ ಆಶಯ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು