ಸೋಮವಾರ, ಆಗಸ್ಟ್ 26, 2019
20 °C
ಪ್ರವಾಹ ಸಂತ್ರಸ್ತರ ನೆರವಿಗೆ ಬಂದ ಫೇಸ್‌ಬುಕ್‌

ಸಂಪರ್ಕ ಕಡಿತ: ಗೂಗಲ್‌ ಅಪ್‌ಡೇಟ್

Published:
Updated:

ಕಾರವಾರ: ನೆರೆ ಕಾರಣಕ್ಕೆ ಪ್ರಮುಖ ಹೆದ್ದಾರಿಗಳ ಸಂಪರ್ಕ ಕಡಿತಗೊಂಡಿದೆ. ಹೀಗೆ ಸಂಚಾರ ರದ್ದಾದ ರಸ್ತೆಗಳ ಮಾಹಿತಿ ಹಂಚಿಕೊಳ್ಳಲು ಅಂತರ್ಜಾಲ ದಿಗ್ಗಜ ‘ಗೂಗಲ್’, ‘ಪಶ್ಚಿಮ ಭಾರತದ ಪ್ರವಾಹ’ (Western India Floods) ಸೂಚನಾ ವ್ಯವಸ್ಥೆಯನ್ನು ತನ್ನ ‘ಗೂಗಲ್ ಮ್ಯಾಪ್’ ಆ್ಯಪ್‌ನಲ್ಲಿ ರೂಪಿಸಿದೆ.

ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಮಳೆಯಿಂದ ರಸ್ತೆ ಹಾಳಾಗುವುದು, ರಸ್ತೆ ಮೇಲೆ ಗುಡ್ಡ ಕುಸಿಯುವುದು.. ಹೀಗೆ ಪ್ರಕೃತಿ ವಿಕೋಪಗಳ ಕಾರಣಕ್ಕೆ ಹಲವು ಹೆದ್ದಾರಿಗಳು ಸಂಪರ್ಕ ಕಳೆದುಕೊಂಡಿವೆ. ಬಹುತೇಕ ಕಡೆಗಳಲ್ಲಿ ಗ್ರಾಮೀಣ ಭಾಗದ ರಸ್ತೆಗಳು ಜಲಾವೃತಗೊಂಡಿವೆ. ಆದರೆ, ಈ ಬಗ್ಗೆ ಮಾಹಿತಿ ಇಲ್ಲದೇ ವಾಹನ ಸವಾರರು ಆ ಕಡೆ ಸಂಚರಿಸಿ ಪರದಾಡುವ ಉದಾಹರಣೆಗಳಿವೆ.

ಇದನ್ನು ತಪ್ಪಿಸುವ ಉದ್ದೇಶದಿಂದ ‘ಗೂಗಲ್ ಮ್ಯಾಪ್‌’ನಲ್ಲಿ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ಸದ್ಯ ಯಾವ ರಸ್ತೆಗಳು ಮುಚ್ಚಿವೆ; ಯಾವ ರಸ್ತೆಗಳು ಸರಿ ಇವೆ ಎಂಬುದರ ಮಾಹಿತಿ ನೀಡುತ್ತದೆ.  ನಿಮಿಷಕ್ಕೊಮ್ಮೆ ಈ ಮಾಹಿತಿ ಅಪ್‌ಡೇಟ್ ಆಗುತ್ತಿರುತ್ತದೆ.

ವಾಹನ ಸಂಚಾರ ಸ್ಥಗಿತಗೊಂಡ ಮಾರ್ಗಗಳನ್ನು ಕೆಂಪು ಬಣ್ಣಗಳಲ್ಲಿ ಸೂಚಿಸಲಾಗಿದೆ. ಸಂಪರ್ಕ ಕಡಿತಗೊಳ್ಳುವ ಹಂತದಲ್ಲಿರುವ ರಸ್ತೆಗಳನ್ನು ಕಡು ಹಳದಿ ಬಣ್ಣಗಳ ಮೂಲಕ ಗುರುತಿಸಲಾಗಿದೆ. ಗೂಗಲ್‌ ಮ್ಯಾಪ್‌ ಬಳಕೆದಾರರು ಸಹ ಮ್ಯಾಪ್‌ನಲ್ಲಿ ಮಾಹಿತಿಯನ್ನು ಹಾಕುವ ಅವಕಾಶ ಕಲ್ಪಿಸಲಾಗಿದೆ.

ನೆರವಿಗೆ ಫೇಸ್‌ಬುಕ್

ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ‘ಫೇಸ್‌ಬುಕ್’, ಪ್ರವಾಹ ಸಂದರ್ಭದಲ್ಲಿ ನೆರವು ನೀಡಲು ಅಥವಾ ನೆರವು ಪಡೆಯಲು ವ್ಯವಸ್ಥೆ ಮಾಡಿದೆ.

ಆ್ಯಪ್‌ನ ಸರ್ಚ್ ವಿಭಾಗದಲ್ಲಿ ‘ಫ್ಲಡ್’ ಎಂದು ಹುಡುಕಿದರೆ ‘ಕ್ರೈಸಿಸ್ ರೆಸ್ಪಾನ್ಸ್’ ಎಂಬ ಮೆನು ಕಾಣಿಸಿಕೊಳ್ಳಲಿದೆ. ಇದನ್ನು ತೆರೆದರೆ, ನೆರೆ ಪ್ರದೇಶದಲ್ಲಿರುವ ಫೇಸ್‌ಬುಕ್‌ನ ಸ್ನೇಹಿತರ ವಿವರ, ನೆರವು ಸಾಮಗ್ರಿಯನ್ನು ನೀಡಲು/ ಪಡೆಯಲು ‘ಆಫರ್ ಹೆಲ್ಪ್’ ಎಂಬ ವಿಭಾಗಗಳನ್ನು ಸೃಷ್ಟಿಸಿದೆ.

‘ಆಫರ್ ಹೆಲ್ಪ್’ ವಿಭಾಗದಲ್ಲಿ ಏನೇನು ನೆರವು ಪಡೆಯಬಹುದು ಅಥವಾ ನೀಡಬಹುದು ಎಂಬ ಆಯ್ಕೆ ಇದೆ. ಅದರಲ್ಲಿ ಮಾಹಿತಿ ಭರ್ತಿ ಮಾಡಿದರೆ, ಅಗತ್ಯವುಳ್ಳವರು ವಾಟ್ಸ್‌ಆ್ಯಪ್ ಅಥವಾ ಮೆಸೆಂಜರ್‌ ಮೂಲಕ ಬಳಕೆದಾರರನ್ನು ಸಂಪರ್ಕಿಸಲಿದ್ದಾರೆ.

ಇನ್ನಷ್ಟು...

* ಕಡಲಾಯ್ತು ದಕ್ಷಿಣ, ಜನ ಹೈರಾಣ

* ರಸ್ತೆ ಬಂದ್; ದುಬಾರಿಯಾಯಿತು ವಿಮಾನ ಪ್ರಯಾಣ

* ಪ್ರವಾಹ, ಭೂಕುಸಿತಕ್ಕೆ 106 ಬಲಿ 

* ಇಳಿದು ಹೋಗಮ್ಮ ಕಾವೇರಿ ತಾಯಿ...

* ಗಂಗಾವಳಿ ಪ್ರವಾಹ; ಹೆದ್ದಾರಿಯಲ್ಲೇ ಜೀವನ

* ಸಿಗದ ಸಂಪರ್ಕ: ಕವಿದ ಆತಂಕ

* ಉಕ್ಕಿದ ನದಿ, ಸಂಕಷ್ಟದಲ್ಲಿ ಜನ–ಜಾನುವಾರು

* ಮಲೆನಾಡಿನಲ್ಲಿ ಭಾರಿ ಮಳೆ: ಪೆಟ್ರೋಲ್; ​ಡೀಸೆಲ್‌​ ಕೊರತೆ

Post Comments (+)