ಗುರುವಾರ , ಆಗಸ್ಟ್ 22, 2019
23 °C

ನಾಲ್ಕು ವರ್ಷಗಳ ನಂತರ ತುಂಬಿದ ಹರಿನಾಲಾ ಜಲಾಶಯ

Published:
Updated:

ಬೆಳಗಾವಿ: ಜಿಲ್ಲೆಯಲ್ಲಿ ಸತತ ನಾಲ್ಕುಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಬೈಲಹೊಂಗಲ ತಾಲ್ಲೂಕು ತಿಗಡಿ ಹರಿನಾಲಾ ಜಲಾಶಯ ನಾಲ್ಕು ವರ್ಷಗಳ ನಂತರ  ಭರ್ತಿಯಾಗಿದ್ದು, ಜನರಿಗೆ ಸಂತಸ ತಂದಿದೆ.

ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಈ ಜಲಾಶಯವು 2015ರ ನಂತರ ತುಂಬಿರಲಿಲ್ಲ. ಜಲಾಶಯ

ಭರ್ತಿಯಾಗಿರುವುದರಿಂದ ಬೈಲಹೊಂಗಲ ಭಾಗದ ರೈತರಲ್ಲಿ ಸಂತಸ‌‌‌‌ ಉಂಟಾಗಿದೆ.

 

ಜಲಾಶಯಗಳ ನೀರಿನ ಮಟ್ಟ

ಮಲಪ್ರಭಾ ಜಲಾಶಯದ ಇಂದಿನ ಮಟ್ಟ 2068 ಅಡಿ ತಲುಪಿದೆ. ಒಳಹರಿವು 31,022 ಕ್ಯೂಸೆಕ್ ಇದ್ದರೆ, ಹೊರಹರಿವು 164 ಕ್ಯೂಸೆಕ್ ಇದೆ. ಜಲಾಶಯದ ಗರಿಷ್ಠ ಮಟ್ಟ 2079 ಅಡಿ.

ಘಟಪ್ರಭಾ ಜಲಾಶಯದ ಇಂದಿನ ಮಟ್ಟ 2162 ಅಡಿ, ಒಳಹರಿವು 36,323 ಕ್ಯೂಸೆಕ್, ಹೊರಹರಿವು 2413 ಕ್ಯೂಸೆಕ್ ಇದೆ. ಜಲಾಶಯದ ಗರಿಷ್ಠ ಮಟ್ಟ 2175 ಅಡಿ.

Post Comments (+)