ಶನಿವಾರ, ಮಾರ್ಚ್ 28, 2020
19 °C

ದೇಶದ್ರೋಹ ಪ್ರಕರಣ: ಮುಖ್ಯ ಶಿಕ್ಷಕಿ, ಬಾಲಕಿಯ ತಾಯಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ದೇಶದ್ರೋಹ ಪ್ರಕರಣದಡಿ ಬಂಧಿಸಲಾದ ಶಾಹೀನ್‌ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ಶಾಲೆಯಲ್ಲಿ ನಾಟಕದ ಸಂದರ್ಭದಲ್ಲಿ ವಿವಾದಾತ್ಮಕ ಶಬ್ದ ಬಳಸಿದ ಬಾಲಕಿಯ ತಾಯಿ ನಜಮುನ್ನೀಸಾ ಅವರು ಶನಿವಾರ ಸಂಜೆ ಜೈಲಿನಿಂದ ಬಿಡುಗಡೆಯಾದರು.

ಶುಕ್ರವಾರ ಸಂಜೆ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಲಯವು ಜಾಮೀನು ನೀಡಿತ್ತು.

ನ್ಯಾಯಾಲಯದ ಜಾಮೀನು ಪತ್ರವನ್ನು ಜೈಲಿನ ಅಧಿಕಾರಿಗೆ ಒಪ್ಪಿಸಿದ ನಂತರ ಇಬ್ಬರನ್ನೂ ಬಿಡುಗಡೆ ಮಾಡಲಾಯಿತು. ಫರೀದಾ ಬೇಗಂ ಅವರ ಪತಿ ಹಮೀದ್‌ ಬೇಗ್‌ ಹಾಗೂ ಶಾಹಿನ್‌ ಶಿಕ್ಷಣ ಸಂಸ್ಥೆಯ ಸಿಇಒ ತೌಸಿಫ್‌ ಮಡಿಕೇರಿ ಅವರು ಇಬ್ಬರನ್ನೂ ಜೈಲಿನಿಂದ ಕರೆದೊಯ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು