ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಡಕಲ್: ವಾರದಲ್ಲಿ 19 ಅಡಿ ಏರಿಕೆ!

Last Updated 12 ಜುಲೈ 2020, 11:10 IST
ಅಕ್ಷರ ಗಾತ್ರ

ಬೆಳಗಾವಿ: ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆ ಬೀಳುತ್ತಿರುವ ಪರಿಣಾಮ ಜಿಲ್ಲೆಯ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.

ಹೋದ ವಾರದಿಂದೀಚೆಗೆ ಜಲಾಶಯಗಳಿಗೆ ಗಣನೀಯ ಪ್ರಮಾಣದಲ್ಲಿ ನೀರು ಹರಿದುಬಂದಿದೆ.

ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ನಲ್ಲಿ ನಿರ್ಮಿಸಿರುವ ಘಟಪ್ರಭಾ ಜಲಾಶಯದ ನೀರಿನ ಮಟ್ಟ ಒಂದೇ ವಾರದಲ್ಲಿ 19 ಅಡಿಗಳಷ್ಟು ಹೆಚ್ಚಾಗಿದೆ. ಗರಿಷ್ಠ 2,175 ಅಡಿಗಳಷ್ಟು ನೀರು ಸಂಗ್ರಹ ಸಾಮರ್ಥ್ಯದ ಈ ಜಲಾಶಯದ ನೀರಿನ ಮಟ್ಟ ಹೋದ ಭಾನುವಾರ 2,106.65 ಅಡಿಗಳಷ್ಟಿತ್ತು. ಭಾನುವಾರ ಇದು 2,125.06 ಅಡಿಗಳಿಗೆ ಏರಿಕೆಯಾಗಿದೆ. 10,981 ಕ್ಯುಸೆಕ್‌ ಒಳಹರಿವಿತ್ತು. ಹಿಂದಿನ ವರ್ಷ ಇದೇ ದಿನ 2124.20 ಅಡಿಗಳಷ್ಟಿತ್ತು.

ನವಿಲುತೀರ್ಥದಲ್ಲಿರುವ ಮಲಪ್ರಭಾ ಜಲಾಶಯದ ನೀರಿನ ಮಟ್ಟ ಕಳೆದ ವಾರಕ್ಕಿಂತ 3 ಅಡಿಗಳಷ್ಟು ಹೆಚ್ಚಾಗಿದೆ. 2,079.50 ಅಡಿ ಗರಿಷ್ಠ ಮಟ್ಟ ಹೊಂದಿರುವ ಇಲ್ಲಿ ಭಾನುವಾರದ ಮಟ್ಟ 2,053.55 ಅಡಿ ಇತ್ತು. ಹೋದ ವಾರ ಕೇವಲ 250 ಕ್ಯುಸೆಕ್‌ ಇದ್ದ ಒಳಹರಿವಿನ ಪ್ರಮಾಣ ಭಾನುವಾರ 5ಸಾವಿರ ಕ್ಯುಸೆಕ್‌ ದಾಟಿತ್ತು. ಇಲ್ಲಿ ಇದೇ ದಿನ ಹಿಂದಿನ ವರ್ಷದ ನೀರಿನ ಮಟ್ಟ 2049.90 ಅಡಿ ಇತ್ತು. ಅಂದರೆ, ಈ ವರ್ಷ ನೀರು ಹೆಚ್ಚಿನ ಪ್ರಮಾಣದಲ್ಲಿದೆ. ಇದೇ ರೀತಿಯಲ್ಲಿ ಮಳೆ ಮುಂದುವರಿದರೆ ಜಲಾಶಯಗಳು ಬೇಗನೆ ಭರ್ತಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT