ಗುರುವಾರ , ಸೆಪ್ಟೆಂಬರ್ 19, 2019
22 °C

ಯರಗುಪ್ಪಿಯಲ್ಲಿ ಮನೆ ಕುಸಿದು ಮೂವರ ದುರ್ಮರಣ

Published:
Updated:

ಕುಂದಗೋಳ: ಇಲ್ಲಿನ ಯರಗುಪ್ಪಿ ಗ್ರಾಮದಲ್ಲಿ ಸೋಮವಾರ ರಾತ್ರಿ ಮನೆ ಕುಸಿದು ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಯಲ್ಲವ್ವ ಗಾಡದ (53), ಜ್ಯೋತಿ ಮೇಟಿ (9) ಹಾಗೂ ಶ್ರಾವಣಿ ರಾದಾಯಿ (4) ಮೃತರು.

ಗಾಯಾಳುಗಳಾದ ದ್ಯಾಮವ್ವ ನಿಂಗಪ್ಪ ಗರಟ್ಟಿ,ರೂಪಾ ಯಲ್ಲಪ್ಪ ಗಾಡದ ಹಾಗೂ ಫಕ್ಕೀರವ್ವ ಗಾಡದ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಕೆಲ ರಾಜಕೀಯ ಮುಖಂಡರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

 ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)