ಶುಕ್ರವಾರ, ಏಪ್ರಿಲ್ 10, 2020
19 °C
10 ಮಂದಿಗೆ ವಾರ್ಷಿಕ ಪ್ರಶಸ್ತಿ, ನಾಲ್ವರಿಗೆ ಪುಸ್ತಕ ಪ್ರಶಸ್ತಿ ಪ್ರಕಟ

ಬಯಲಾಟ ಅಕಾಡೆಮಿ ಐವರಿಗೆ ಗೌರವ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಇಲ್ಲಿನ ಕರ್ನಾಟಕ ಬಯಲಾಟ ಅಕಾಡೆಮಿಯ ಪ್ರಸಕ್ತ ಸಾಲಿನಲ್ಲಿ ಐವರು ಕಲಾವಿದರಿಗೆ ಗೌರವ ಪ್ರಶಸ್ತಿ, 10 ಮಂದಿಗೆ ವಾರ್ಷಿಕ ಪ್ರಶಸ್ತಿ ಹಾಗೂ ನಾಲ್ವರಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಿದೆ.

ಗೌರವ ಪ್ರಶಸ್ತಿ ₹50 ಸಾವಿರ ನಗದು, ವಾರ್ಷಿಕ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ತಲಾ ₹ 25 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ಫೆಬ್ರುವರಿಯಲ್ಲಿ ದಾವಣಗೆರೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಗೌರವ ಪ್ರಶಸ್ತಿ: ದೊಡ್ಡಾಟ ಪ್ರಕಾರದ ಕಲಾವಿದರಾದ ಧೂಪದ ಕೊಟ್ರಪ್ಪ (ಬಳ್ಳಾರಿ), ಶ್ರೀಶೈಲ ಹುದ್ದಾರ (ಧಾರವಾಡ), ಎಚ್.ಎಸ್.ಪಾಟೀಲ (ಕೊಪ್ಪಳ), ಶ್ರೀಕೃಷ್ಣ ಪಾರಿಜಾತದಲ್ಲಿ ಛಾಪು ಮೂಡಿಸಿರುವ ಶಾಂತವ್ವ ಜಾಲಿಕಟ್ಟಿ (ಬಾಗಲಕೋಟೆ), ಬಾಪು ತಾಸೆವಾಲೆ (ಬೆಳಗಾವಿ).

ವಾರ್ಷಿಕ ಪ್ರಶಸ್ತಿ: ದೊಡ್ಡಾಟ ಪ್ರಕಾರದಲ್ಲಿ ಎನ್.ರಂಗನಾಥ (ದಾವಣಗೆರೆ), ಛಲವಾದಿ ಕೆಂಚಪ್ಪ (ಬಳ್ಳಾರಿ), ಸಣ್ಣಬೋರಯ್ಯ (ಚಿತ್ರದುರ್ಗ), ಎಂ.ಸೋಮಶೇಖರಪ್ಪ (ಕೊಪ್ಪಳ), ಫಿರೋಜ್ ಶಿಂಧೆ (ಹಾವೇರಿ), ಸಣ್ಣಾಟ ಪ್ರಕಾರದಲ್ಲಿ ಭೀಮಪ್ಪ ಹುದ್ದಾರ (ಬೆಳಗಾವಿ), ಬಸವಂತ ಮಾಳಿ (ವಿಜಯಪುರ), ಶ್ರೀಕೃಷ್ಣ ಪಾರಿಜಾತ ಕಲಾವಿದರಾದ ಚಿದಾನಂದ ಹಲಗಲಿ (ಬಾಗಲಕೋಟೆ), ಯಲ್ಲವ್ವ ಮಾದರ (ಬೆಳಗಾವಿ) →ಹಾಗೂ ಸೂತ್ರದ →ಗೊಂಬೆ ಕಲಾವಿದ →ಬಸವಲಿಂಗಪ್ಪ (ಬಳ್ಳಾರಿ) →ಆಯ್ಕೆಯಾಗಿದ್ದಾರೆ.

2017-18ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ: ಮೈಸೂರಿನ ಡಾ. ಸುಜಾತಾ (ಸಾರಥಿ) ಹಾಗೂ ಬಳ್ಳಾರಿ ಜಿಲ್ಲೆಯ ಡಾ. ವೀರೇಶ ಬಡಿಗೇರ (ನಾಡೋಜ ಯಲ್ಲವ್ವ ರೊಡ್ಡಪ್ಪನವರ).

2018-19 ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ: ಬಾಗಲಕೋಟೆಯ ಡಾ.ಶ್ರೀರಾಮ ಇಟ್ಟಣ್ಣವರ (ಬಯಲಾಟ ಲೇಖನಗಳು) ಹಾಗೂ ಧಾರವಾಡ ಜಿಲ್ಲೆಯ ಎಂ.ಎಸ್.ಮಾಳವಾಡ (ವೀರರಾಣಿ ಕಿತ್ತೂರು ಚನ್ನಮ್ಮ).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು