ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ ಕಂಕಣಕ್ಕೆ ಚಂದ್ರ ಸಾಕ್ಷಿ; ಕಾಸರಗೋಡಿನಲ್ಲಿ ಕಂಡ 'ಬೆಂಕಿ ಉಂಗುರ'

ವಿಜ್ಞಾನ ಕುತೂಹಲ
Last Updated 26 ಡಿಸೆಂಬರ್ 2019, 5:27 IST
ಅಕ್ಷರ ಗಾತ್ರ

ಕಾಸರಗೋಡು: ‘ಕಂಕಣ ಸೂರ್ಯಗ್ರಹಣ’ದ ಸೊಬಗು ಕಣ್ತುಂಬಿಕೊಳ್ಳಲು ನೆರೆದಿದ್ದ ಜನರಿಗೆ ಮೋಡಗಳುಅಡ್ಡಿ ಮಾಡದೆ ಚಂದ್ರನ ಗಾಢ ನೆರಳು ಕರಾವಳಿ ಭಾಗದಲ್ಲಿ ಹರಡಿತು. ಬೆಳಿಗ್ಗೆ 9:24ಕ್ಕೆ ಸೂರ್ಯನಿಗೆ ಕಂಕಣ ಮೂಡಿತು.

ಕಾಸರಗೋಡು ಸಮೀಪದ ಚೆರುವತೂರ್‌ನ ಕಡಕ್ಕೊಟ್ಟೆಯಲ್ಲಿ ಸೂರ್ಯನಿಗೆ ಕಂಕಣ ಮೂಡುವ ವಿದ್ಯಮಾನ ಸ್ಪಷ್ಟವಾಗಿ ಗೋಚರಿಸಿತು. ವಿದ್ಯಾರ್ಥಿಗಳು, ಮಕ್ಕಳ ಜತೆಗೆ ಪಾಲಕರೂ ಸಹ ಸೂರ್ಯಗ್ರಹಣದ ವಿವಿಧ ಹಂತಗಳನ್ನು ಕುತೂಹಲದಿಂದ ವೀಕ್ಷಿಸಿದರು.

ಬೆಳಿಗ್ಗೆ 8:23ರಿಂದ ಚಂದ್ರನ ನೆರಳು ಸೂರ್ಯನನ್ನು ಆವರಿಸಿಕೊಳ್ಳುತ್ತಿರುವ ಸ್ಪಷ್ಟವಾಗಿ ಕಂಡಿತು. ಆದರೆ, 8:37ಕ್ಕೆ ಮೋಡದ ಮುಸುಕು ಸೂರ್ಯ–ಚಂದ್ರನನ್ನು ಆವರಿಸಿಕೊಳ್ಳಲು ಶುರುವಾಯಿತು. ಸೌರ ಕನ್ನಡಕಗಳನ್ನು ಧರಿಸಿ ಆಗಸದತ್ತ ಮುಖವಾಗಿ ನಿಂತಿದ್ದ ಎಲ್ಲರನ್ನೂ ನಿರಾಸೆಯ ಮೋಡ ಒಮ್ಮೆಗೆ ವ್ಯಾಪಿಸಿತು. ಆದರೆ, ಜನರು ವಿಚಲಿತರಾಗದೆ ವೀಕ್ಷಣೆ ಮುಂದುವರಿಸಿದ್ದರು. ಹತ್ತು ನಿಮಿಷಗಳಲ್ಲಿ ಮತ್ತೆ ಚಿತ್ರಣ ಸ್ಪಷ್ಟ.

9 ಗಂಟೆಗೆ ಸೂರ್ಯ ಅರ್ಧ ಚಂದ್ರನಂತೆಕಾಣುತ್ತಿದ್ದ, ಸೂರ್ಯನನ್ನು ಚಂದ್ರ ಇನ್ನೇನು ನುಂಗೇ ಬಿಟ್ಟಿತು ಎನ್ನುವಷ್ಟರಲ್ಲಿ 9:24ಕ್ಕೆ ಸೂರ್ಯನಿಗೆ ಕಂಕಣ ಮೂಡಿತು. ನೆರೆದವರಲ್ಲಿ 'ಓ..' ಎಂದು ಅಚ್ಚರಿಯ ಉದ್ಗಾರ...

9:24ರಿಂದ 9:27ರ ವರೆಗೆ ಸುಮಾರು 3 ನಿಮಿಷ ಇಲ್ಲಿ ಕಂಕಣ ಸೂರ್ಯಗ್ರಹಣ ಕಾಣಲು ಸಾಧ್ಯವಾಯಿತು. ಮುಂದಿನ ಪ್ರತಿ ನಿಮಿಷಕ್ಕೂ ಚಂದ್ರ ಸೂರ್ಯನಿಂದ ಸರಿದು ಹೋದ. 9:55ಕ್ಕೆ ಚಂದ್ರನ ಅರ್ಧದಷ್ಟು ಛಾಯೆ ಸರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT