ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 4 ಕೋಟಿಗೆ ‘ಕಿಡ್ನಿ’ ಖರೀದಿ ಆಮಿಷ; ಕೆಮರೊನ್ ಪ್ರಜೆ ಬಂಧನ

Last Updated 14 ಫೆಬ್ರುವರಿ 2020, 18:55 IST
ಅಕ್ಷರ ಗಾತ್ರ

ಬೆಂಗಳೂರು: ₹ 4 ಕೋಟಿಗೆ ಕಿಡ್ನಿ ಖರೀದಿಸುವುದಾಗಿ ಹೇಳಿ ಜಾಹೀರಾತು ನೀಡಿ ಜನರನ್ನು ವಂಚಿಸುತ್ತಿದ್ದ ಆರೋಪದಡಿ ಕೆಮರೊನ್ ಪ್ರಜೆಫತ್‌ಬ್ವೆಕಾ ಡೆಕ್ಲನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿದ್ದ ಆರೋಪಿ, ಕಾಲೇಜೊಂದರಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ. ಎರಡನೇ ಸೆಮಿಸ್ಟರ್ ಅನುತ್ತೀರ್ಣನಾಗಿದ್ದ ಆತ, ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿದ್ದ. ವೆಬ್‌ಸೈಟ್ ಡಿಸೈನ್ ಕೋರ್ಸ್‌ ಮುಗಿಸಿದ್ದ ಆರೋಪಿ, ‘ಸೇಲ್ ಯೂವರ್ ಕಿಡ್ನಿ ಡಾಟ್ ಇನ್’ ಹೆಸರಿನಲ್ಲಿ ಜಾಲತಾಣ ತೆರೆದು ಜನರನ್ನು ವಂಚಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಪ್ರತಿಷ್ಠಿತ ಆಸ್ಪತ್ರೆ ಹಾಗೂ ಅಲ್ಲಿಯ ವೈದ್ಯರ ಫೋಟೊವನ್ನು ಆರೋಪಿ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ. ಕಿಡ್ನಿ ದಾನಿಗಳು ಸಂಪರ್ಕಿಸಬಹುದು ಎಂದು ಮೊಬೈಲ್‌ ಸಂಖ್ಯೆಯನ್ನೂ ನೀಡಿದ್ದ. ಜನರು ಆ ಸಮಖ್ಯೆಗೆ ಕರೆ ಮಾಡಿ ಆತನನ್ನು ಸಂಪರ್ಕಿಸುತ್ತಿದ್ದರು’ ಎಂದರು.

‘ಕಿಡ್ನಿ ದಾನ ಮಾಡಿದವರಿಗೆ ಮುಂಗಡವಾಗಿ ₹2 ಕೋಟಿ ಹಾಗೂ ಶಸ್ತ್ರಚಿಕಿತ್ಸೆ ಬಳಿಕ ₹ 2 ಕೋಟಿ ನೀಡುವುದಾಗಿ ಆರೋಪಿ ಹೇಳುತ್ತಿದ್ದ. ರಕ್ತ ಪರೀಕ್ಷೆ, ಪ್ರವೇಶ ಶುಲ್ಕ, ನೋಂದಣಿ ಶುಲ್ಕದ ಹೆಸರಿನಲ್ಲಿ ಜನರಿಂದಲೇ ಮುಂಗಡವಾಗಿ ₹ 15 ಸಾವಿರ ಪಡೆಯುತ್ತಿದ್ದ. ಆ ಹಣವನ್ನೂ ಮೀಜೋರಾಂನ ವ್ಯಕ್ತಿಯೊಬ್ಬರ ಖಾತೆಗೆ ಹಾಕಿಸಿಕೊಳ್ಳುತ್ತಿದ್ದ. ಆತನಿಗೂ ಪಾಲು ನೀಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿಯಿಂದ ಲಾಪ್‌ಟ್ಯಾಪ್, ಪೆನ್‌ಡ್ರೈವ್, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಜಾನುವಾರು ಹಾಗೂ ಔಷಧಿ ಮಾರಾಟ ನೆಪದಲ್ಲಿ ಆರೋಪಿ ಜನರನ್ನು ವಂಚಿಸಿರುವ ಅನುಮಾನವಿದೆ. ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲೂ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT