ಶನಿವಾರ, ಏಪ್ರಿಲ್ 4, 2020
19 °C

ಕೋವಿಡ್‌-19 ಬಗ್ಗೆ ಕೋಡಿ ಮಠದ ಶ್ರೀ ಹೇಳಿದ್ದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಮದ್ದಿಲ್ಲದ ಕಾಯಿಲೆ ಬರುತ್ತೆ ಅಂತ ನಾ ಹೇಳಿದ್ದು ನಿಜವಾಗಿದೆ. ಕೋವಿಡ್‌ 19 ವೈರಸ್‌ ಸಾವಿರಾರು ಸಂಖ್ಯೆಯಲ್ಲಿ ಜೀವ ಬಲಿ ಪಡೆಯಲಿದೆ. ಆದರೆ, ಈ ಮದ್ದಿಲ್ಲದ ಸೋಂಕಿಗೆ ಭಾರತದ ಮಂತ್ರಶಕ್ತಿಯಲ್ಲಿ ಪರಿಹಾರ ಇದೆ’ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈಗ ಬಂದಿರುವ ಕೋವಿಡ್‌ 19 ವೈರಾಣು ವಿಶ್ವವನ್ನು ಆವರಿಸಲಿದೆ, ಸಾವಿರಾರು ಜನ ಈ ಸೋಂಕಿಗೆ ಬಲಿಯಾಗಲಿದ್ದಾರೆ. ಈ ಕಾಯಿಲೆ ಭವಿಷ್ಯದಲ್ಲಿ ಜಡತ್ವದಂತಹ ಕಲ್ಲು, ಮಣ್ಣು, ಮರಗಳಿಗೂ ಆವರಿಸಲಿದೆ’ ಎಂದು ಹೇಳಿದರು.

‘ಈ ಸೋಂಕಿಗೆ ಮದ್ದು ಕಂಡು ಹಿಡಿಯುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ, ಇದಕ್ಕೆ ಭಾರತದಲ್ಲಿ ಮಾತ್ರ ಪರಿಹಾರ ಇದೆ. ಋಷಿ ಮುನಿಗಳು ಕೊಟ್ಟ ಗಿಡಮೂಲಿಕೆ, ಹಳ್ಳಿ ನಾಟಿ ವೈದ್ಯರಿಂದ ಮಾತ್ರ ಈ ಸೋಂಕು ಗುಣಪಡಿಸಲು ಸಾಧ್ಯ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು