ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಕೆಎಸ್‌ಆರ್‌ಟಿಸಿಯ ₹182 ಕೋಟಿ ವರಮಾನ ಖೋತಾ

Last Updated 9 ಏಪ್ರಿಲ್ 2020, 1:51 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್–19 ಹರಡದಂತೆ ತಡೆಯಲು ಲಾಕ್‌ಡೌನ್ ಘೋಷಿಸಿದ ನಂತರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಈವರೆಗೆ ಸಂಸ್ಥೆಯ ವರಮಾನದಲ್ಲಿ ₹182 ಕೋಟಿ ಖೋತಾ ಆಗಿದೆ ಎಂದು ಅಂದಾಜಿಸಲಾಗಿದೆ.

746 ಐಷಾರಾಮಿ ಬಸ್‌ಗಳು, 7,364 ಸಾಮಾನ್ಯ ಬಸ್‌ಗಳು ಪ್ರಯಾಣಿಕರನ್ನು ಹೊತ್ತು ದಿನಕ್ಕೆ 30,11,786 ಕಿಲೋ ಮೀಟರ್ ಸಂಚರಿಸುತ್ತಿದ್ದವು. ಸಂಚಾರ ಸ್ಥಗಿತಗೊಂಡಿರುವ ಕಾರಣ ದಿನಕ್ಕೆ ₹9.87 ಕೋಟಿ ವರಮಾನ ಖೋತಾ ಆಗಿದೆ ಎಂದು ಕೆಎಸ್ಆರ್‌ಟಿಸಿ ಅಂದಾಜಿಸಿದೆ.

ಲಾಕ್‌ಡೌನ್ ಘೋಷಣೆಗೆ ಮುನ್ನವೂ ಐಷಾರಾಮಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಮಾರ್ಚ್‌ 1ರಿಂದ ಈವರೆಗೆ ಐಷಾರಾಮಿ ಬಸ್‌ಗಳಿಂದ ₹37.28 ಕೋಟಿ, ಸಾಮಾನ್ಯ ಬಸ್‌ಗಳಿಂದ ₹144 ಕೋಟಿ ವರಮಾನ ಬರುತ್ತಿತ್ತು ಎಂದು ನಿಗಮ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT