ಕೆಎಸ್‌ಆರ್‌ಟಿಸಿಯಿಂದ ಸಿ.ಎಂ.ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ₹9.17 ಕೋಟಿ ಪರಿಹಾರ

ಶುಕ್ರವಾರ, ಮೇ 24, 2019
23 °C

ಕೆಎಸ್‌ಆರ್‌ಟಿಸಿಯಿಂದ ಸಿ.ಎಂ.ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ₹9.17 ಕೋಟಿ ಪರಿಹಾರ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೆಎಸ್‌ಆರ್‌ಟಿಸಿಯಿಂದ ಮಡಿಕೇರಿ ಪ್ರವಾಹ ಸಂತ್ರಸ್ಥರಿಗಾಗಿ ಸಂಗ್ರಹಿಸಲಾದ ಒಟ್ಟು ₹9.17 ಕೋಟಿ ಮೌಲ್ಯದ ಚೆಕ್‌ ಅನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಇಂದು ಗುರುವಾರ ತಮ್ಮ ಕಚೇರಿಯಲ್ಲಿ ಸ್ವೀಕರಿಸಿದರು.

ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಅಧಿಕಾರಿ ಹಾಗೂ ಸಿಬ್ಬಂದಿಗಳ ಒಂದು ದಿನದ ಸಂಬಳದಿಂದ ಸಂಗ್ರಹವಾದ ಹಣವನ್ನು ಮಡಿಕೇರಿ ಸಂತ್ರಸ್ಥರ ನೆರವಿಗಾಗಿ ಸಲ್ಲಿಸಲಾಗಿದೆ. 

ಈ ಸಂದರ್ಭದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಶಾಸಕರಾದ ಶಿವಲಿಂಗೇಗೌಡ, ಸತ್ಯನಾರಾಯಣ, ಕೆ.ಎಸ್.ಆರ್.ಟಿ.ಸಿ. ಹಿರಿಯ ಅಧಿಕಾರಿಗಳಾದ ಬಸವರಾಜು, ಶಿವಯೋಗಿ ಕಳಸದ, ಎನ್.ವಿ.ಪ್ರಸಾದ ಉಪಸ್ಥಿತರಿದ್ದರು.

ಇದೇ ವೇಳೆ ಕೆಎಸ್‌ಆರ್‌ಟಿಸಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯಿಂದ ₹17.81 ಲಕ್ಷ ರೂಗಳ ಪರಿಹಾರ ನಿಧಿ ಚೆಕ್ ಸ್ವೀಕರಿಸಲಾಯಿತು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !