ಶುಕ್ರವಾರ, ಆಗಸ್ಟ್ 6, 2021
21 °C

ಆನ್‌ಲೈನ್‌ನಲ್ಲೇ ಸಾಹಿತ್ಯ ಚಟುವಟಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಆನ್‌ಲೈನ್ ಮೂಲಕವೇ ಕಾರ್ಯಚಟುವಟಿಕೆ ನಡೆಸಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಕರ್ನಾಟಕ ಘಟಕವು ರಾಜ್ಯದಲ್ಲಿ 51 ಘಟಕಗಳಿಗೆ ಚಾಲನೆ ನೀಡಿದೆ.

ಪರಿಷದ್‌ನ ಕರ್ನಾಟಕ ಘಟಕ 2015ರಲ್ಲಿ ಕಾರ್ಯ ಆರಂಭಿಸಿದೆ. ಲಾಕ್‌ಡೌನ್ ಅವಧಿಯಲ್ಲೇ 50 ಘಟಕಗಳನ್ನು ಆರಂಭಿಸಲಾಗಿದ್ದು, ಒಟ್ಟು 100 ಘಟಕಗಳು ರಾಷ್ಟ್ರೀಯ ಸಾಹಿತ್ಯ ಪ್ರಚಾರದಲ್ಲಿ ತೊಡಗಿಕೊಂಡಿವೆ. ಕನ್ನಡದ ಮೊದಲ ಶಾಸನ ದೊರೆತ ಹಲ್ಮಿಡಿಯಲ್ಲಿ 101ನೇ ಘಟಕ ಶನಿವಾರ ಉದ್ಘಾಟನೆಗೊಳ್ಳಲಿದೆ.

‘ಲಾಕ್‌ಡೌನ್ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವೆಬಿನಾರ್‌ ಮೂಲಕ ಅಭ್ಯಾಸ ವರ್ಗ ನಡೆಸಲಾಗಿದೆ. ರಾಷ್ಟ್ರೀಯ ಸಾಹಿತ್ಯದ ಸೃಷ್ಟಿ ಮತ್ತು ಪ್ರಚಾರ, ಸಾಹಿತ್ಯದ ಕಾರ್ಯಕರ್ತರ ಕಾರ್ಯವೈಖರಿ ಏನು ಎಂಬುದನ್ನು ಅಭ್ಯಾಸ ವರ್ಗದಲ್ಲಿ ತಿಳಿಸಲಾಗುತ್ತದೆ’ ಎಂದು ಪರಿಷದ್‌ನ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು