ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಮಕ್ಕಳಿಗೆ ಅಭಿನಂದನೆ ತಿಳಿಸಿದ ಸಚಿವ ಸುಧಾಕರ್

Last Updated 3 ಜುಲೈ 2020, 11:53 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಇದ್ದರೂ ಮಕ್ಕಳ ಸುರಕ್ಷತೆಗೆ ಒತ್ತುಕೊಟ್ಟು ಸುಗಮವಾಗಿ ಪರೀಕ್ಷೆ ಜರುಗಲು ಶ್ರಮಿಸಿದ ಪೋಷಕರು ಹಾಗೂ ಧೈರ್ಯವಾಗಿ ಪರೀಕ್ಷೆ ಬರೆದ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅಭಿನಂದನೆ ತಿಳಿಸಿದ್ದಾರೆ.

ಎಸ್ಎಸ್ಎಲ್‌ಸಿ ಪ್ರಶ್ನೆ ಪತ್ರಿಕೆಯ ಅಂತಿಮ ಪರೀಕ್ಷೆಯು ಶುಕ್ರವಾರಕ್ಕೆ ಮುಕ್ತಾಯಗೊಂಡಿದೆ. ಈ ಸಮಯದಲ್ಲಿ ಮಕ್ಕಳಿಗೆ, ಪೋಷಕರಿಗೆ ಟ್ವಿಟರ್ ಮೂಲಕ ಡಾ.ಸುಧಾಕರ್ ಅಭಿನಂದನೆ ತಿಳಿಸಿದ್ದಾರೆ.

ಎಸ್ಎಸ್ಎಲ್‌ಸಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕೊರೊನಾ ಪರಿಸ್ಥಿತಿಯಲ್ಲಿ ಮಕ್ಕಳ ಸುರಕ್ಷತೆಗೆ ಒತ್ತು ಕೊಟ್ಟು ಸುಗಮವಾಗಿ ಪರೀಕ್ಷೆ ಜರುಗಲು ಶ್ರಮಿಸಿದ ಸಿಬ್ಬಂದಿಗೆ, ಮಕ್ಕಳನ್ನು ಹುರಿದುಂಬಿಸಿದ ಪೋಷಕರಿಗೆ, ಧೈರ್ಯವಾಗಿ ಪರೀಕ್ಷೆ ಬರೆದ ಮಕ್ಕಳಿಗೆ ಅಭಿನಂದನೆಗಳು. ಕರ್ನಾಟಕ ಇಂದು ಮತ್ತೊಮ್ಮೆ ದೇಶಕ್ಕೆ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ.

ಟ್ವಿಟರ್‌ನಲ್ಲಿ ಪ್ರತಿಯಾಗಿ ಕೇವಲ 2.30ಗಂಟೆಗಳ ಅವಧಿಯಲ್ಲಿ 958 ಮಂದಿ ಲೈಕ್ ಮಾಡಿದ್ದಾರೆ. ಹಲವರು ಸರ್ಕಾರದ ಪರವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಕೊರೊನಾ, ಗ್ರಹಣ ಎಂದು ಭಯಹುಟ್ಟಿಸಿದವರ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT