ಮಂಗಳವಾರ, ಫೆಬ್ರವರಿ 25, 2020
19 °C

ಸಿಎಎ ವಿರುದ್ಧ ಪ್ರತಿಭಟನೆ ತಡೆಗೆ ನಿಷೇಧಾಜ್ಞೆ ಜಾರಿ ಸರಿ: ಸಂಸದ ಜಿ.ಎಸ್.ಬಸವರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸಿಎಎ ವಿರುದ್ಧ ಪ್ರತಿಭಟನೆಗಳು ಹೆಚ್ಚಿ ಸಮಾಜದ ಶಾಂತಿ ಹಾಳಾಗುತ್ತಿತ್ತು. ಸಮಾಜ ಘಾತುಕ ಶಕ್ತಿಗಳು ಊರುಗಳನ್ನೆ ಸುಟ್ಟು ಹಾಕುವ ಸಾಧ್ಯತೆ ಇತ್ತು. ಅದನ್ನು ತಡೆಯಲೆಂದೇ ರಾಜ್ಯ ಸರ್ಕಾರ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿತ್ತು ಎಂದು ತುಮಕೂರು ಸಂಸದ ಜಿ.ಎಸ್.ಬಸವರಾಜು ಅವರು ಹೇಳಿದರು.

ಪ್ರತಿಭಟನೆ ವೇಳೆ ಹೇರಿದ್ದ ನಿಷೇಧಾಜ್ಞೆಯನ್ನು 'ಕಾನೂನು ಬಾಹಿರ' ಎಂದು ಹೈಕೋರ್ಟ್ ಹೇಳಿದೆಯಲ್ಲ ಎಂಬ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.

ಶಾಂತಿ ಕದಡುವ ದುಷ್ಟರಿಂದ ಹೆಣ್ಣು ಮಕ್ಕಳಿಗೆ ರಕ್ಷಣೆ ಬೇಡವೆ, ₹500 ಬಾಡಿಗೆ ಗುಂಡಾಗಳನ್ನು ತಂದು ಬೆಂಕಿ ಹಚ್ಚಿದರೆ ಯಾರ್ರಿ ಕಾಯ್ತಾರೆ. ಅವರನ್ನು ನಿಯಂತ್ರಣ ಮಾಡೋದು ಬೇಡವೆ. ಸಮಾಜದ ಶಾಂತಿಗಾಗಿಯೇ ಆ ಕ್ರಮ ಕೈಗೊಂಡಿತ್ತು ಎಂದು ಅವರು ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ತುಮಕೂರು ಹೇಮಾವತಿ ನಾಲೆಯ 70 ಕಿ.ಮೀ.ನ ಗುರುತಿನಿಂದ ಲಿಂಕಿಂಗ್ ಎಕ್ಸ್‌ಪ್ರೆಸ್‌ ಕೆನಾಲ್ ನಿರ್ಮಿಸಿ ಕುಣಿಗಲ್, ರಾಮನಗರಕ್ಕೆ ನೀರು ಹರಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಡಲು ತೀರ್ಮಾನಿಸಿದೆ ಎಂದ ಅವರು, ಈ ಕುರಿತು ಮುಂದಿನ ವಾರದ ಸಚಿವ ಸಂಪುಟದ ಸಭೆಯಲ್ಲಿ ಅಧಿಕೃತ ಆದೇಶ ಹೊರಬರಲಿದೆ ಎಂದು ಸಂಸದರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು