ಭಾನುವಾರ, ಮಾರ್ಚ್ 29, 2020
19 °C
ಶೆಟ್ಟರ್ ಮನೆಯಲ್ಲಿ ನಡೆದಿದ್ದು ರಹಸ್ಯ ಸಭೆಯಲ್ಲ ಎಂದ ಶಾಸಕ

ನಾನೂ ಸಚಿವ ಸ್ಥಾನದ ಆಕಾಂಕ್ಷಿ: ರೇಣುಕಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Renukacharya

ಬೆಂಗಳೂರು: ಮಧ್ಯ ಕರ್ನಾಟಕಕ್ಕೆ ಸಚಿವ ಸ್ಥಾನ ಸಿಗಬೇಕು. ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

‘ಕೆಲವು ಶಾಸಕರು ಜಗದೀಶ ಶೆಟ್ಟರ್ ಜತೆ ನಡೆಸಿರುವುದು ರಹಸ್ಯ ಸಭೆಯಲ್ಲ. ಶೆಟ್ಟರ್ ಮುಖ್ಯಮಂತ್ರಿ ಆಗಿದ್ದವರು. ಅವರೊಂದಿಗೆ ಮಾತುಕತೆ ನಡೆಸಿದರೆ ತಪ್ಪೇನು? ಸಿಎಂ ಯಡಿಯೂರಪ್ಪ ವಿರುದ್ದ ಯಾರೂ ಸಭೆ ನಡೆಸಿಲ್ಲ. ನಾಯಕತ್ವದ ಬಗ್ಗೆ ಯಾರಿಗೂ ಅಪಸ್ವರವಿಲ್ಲ. ಹಾಗೆಯೇ ನಮ್ಮ ನಾಯಕರ ಮನೆಗೆ ಭೇಟಿ ನೀಡಿರುವುದರಲ್ಲಿ ಯಾವ ತಪ್ಪಿಲ್ಲ’ ಎಂದು ಅವರು ಹೇಳಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವು ಶಾಸಕರ ಮತ ಅಸಿಂಧುವಾಗಿರುವುದು ಆಕಸ್ಮಿಕವಾಗಿರಬಹುದು. ಪಕ್ಷಕ್ಕೆ ದ್ರೋಹ ಮಾಡುವ ಕೆಲಸವನ್ನು ನಾವು ಯಾರೂ ಮಾಡುವುದಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಇದನ್ನೂ ಓದಿ: ಜಗದೀಶ್‌ ಶೆಟ್ಟರ್ ಮನೆಯಲ್ಲಿ ಅತೃಪ್ತ ಶಾಸಕರ ಸಭೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು