ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ದಿನಾಚರಣೆ, ಸಮಾವೇಶ 23ರಂದು

Last Updated 18 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಬೆಳಗಾವಿ: ‘ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ವತಿಯಿಂದ ಡಿ. 23ರಂದು ಬೆಳಿಗ್ಗೆ 10ಕ್ಕೆ ಇಲ್ಲಿನ ಮಹಾಂತೇಶ ನಗರದ ಮಹಾಂತ ಭವನದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಕೃಷಿಕರು, ಕೃಷಿ ಕಾರ್ಮಿಕರು, ವಸತಿ ‌ಮತ್ತು ಭೂವಂಚಿತರ ಸಮಾವೇಶ ಆಯೋಜಿಸಲಾಗಿದೆ’ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಜಿ ಪ್ರಧಾನಿ ದಿ.ಚರಣಸಿಂಗ್ ಚೌಧರಿ ಅವರ ಜನ್ಮ ದಿನವನ್ನು ರಾಷ್ಟ್ರೀಯ ರೈತ ದಿನವಾಗಿ ಆಚರಿಸಲಾಗುತ್ತಿದೆ. ಅಂದು ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗುವುದು. ಅಂಚೆ ಇಲಾಖೆಯಿಂದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಫಲಾನುಭವಿಗಳಿಗೆ ಉಳಿತಾಯ ಖಾತೆ ಪುಸ್ತಕಗಳನ್ನು ವಿತರಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ನಾಗನೂರು ಮಠದ ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಉದ್ಘಾಟಿಸುವರು. ಸಾಮಾಜಿಕ ಕಾ‌ರ್ಯಕರ್ತ ಶಿವಾಜಿ ಕಾಗಣೀಕರ, ಪತ್ರಕರ್ತ ಈಶ್ವರ ಸಂಪಗಾವಿ, ಅಂಚೆ ಇಲಾಖೆಯ ಉತ್ತರ ಕರ್ನಾಟಕ ವಲಯದ ಪೋಸ್ಟ್‌ ಮಾಸ್ಟರ್ ಜನರಲ್ ವೀಣಾ ಶ್ರೀನಿವಾಸ್, ಕಳಸಾ-ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ, ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ನಿರ್ದೇಶಕ ಉಮೇಶ ಬಾಳಿ, ಆರ್‌ಟಿಒ ಶಿವಾನಂದ ಮಗದುಮ್, ಅಂಚೆ ಕಚೇರಿಯ ಸೂಪರಿಂಟೆಂಡೆಂಟ್‌ ಎಸ್.ಡಿ.ಕುಲಕರ್ಣಿ, ಕುಸ್ತಿಗಿರಿ ಸಂಘಟನೆ ಅಧ್ಯಕ್ಷ ಪಾಂಡುರಂಗ ಪಾಟೀಲ, ಇಫ್ಕೊ ಕಂಪನಿಯ ರಾಜ್ಯ ಮಾರುಕಟ್ಟೆ ವ್ಯವಸ್ಥಾಪಕ ಡಾ.ಸಿ. ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

‘ಪ್ರಗತಿಪರ ರೈತರಾದ ಬಸವಣ್ಣೆಪ್ಪ ಉಳ್ಳಾಗಡ್ಡಿ, ಕಲ್ಲಪ್ಪ ನೇಗಿನಹಾಳ, ಚಂದ್ರಕಾಂತ ತೋಟಗಿ, ಭೀಮಣ್ಣ ಖಿಲಾರಿ, ಅಪ್ಪಣ್ಣ ನೇಸರಕರ, ಬಸಯ್ಯ ಪೂಜಾರ, ಗುರುನಾಥ ಭೂಸಿ, ಬಸು ರಾಮ ಪಾಟೀಲ ಮತ್ತು ರುದ್ರಪ್ಪ ಬೋಳಶೇಟ್ಟಿ, ನಿವೃತ್ತ ಯೋಧರಾದ ದೇವೇಂದ್ರ ಹಂಚಿನಮನಿ, ವೀರು ದೊಡ್ಡವೀರಪ್ಪನವರ, ಲಕ್ಷ್ಮಣ ಬಸಪ್ಪ ನೆಲಗಂಟಿ, ಬಸವರಾಜ ಪೂಜಾರ, ಕುಮಾರ ಹಿರೇಮಠ, ಬಸವರಾಜ ಮೂಲಿಮನಿ, ಶಿವಾಜಿ ಕದಂ, ಬಸಲಿಂಗಪ್ಪ ಗುಬಚಿ, ಮಲಗೌಡ ಕೊಡ್ಲಿ, ಎಂ.ಆರ್‌. ಮಿಂಡೋಳ್ಳಿ, ಶಂಕರ ಸೋನಪ್ಪನವರ ಹಾಗೂ ಯಲ್ಲಪ್ಪ ಬಸವಂತ ಅವರನ್ನು ಸನ್ಮಾನಿಸಲಾಗುವುದು’ ಎಂದರು.

ಸಂಘಟನೆಯ ಆರ್.ಎಸ್. ದರ್ಗೆ, ಸುರೇಶ ಮರಲಿಂಗಣ್ಣವರ, ಸುನೀಲ ಹಂಪಣ್ಣವರ, ಅಡಿವೆಪ್ಪ ಕುಂದರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT