ಆಪರೇಷನ್ ಕಮಲ ಅಲ್ಲ: ಈಶ್ವರಪ್ಪ

ಮಂಗಳವಾರ, ಜೂಲೈ 23, 2019
20 °C

ಆಪರೇಷನ್ ಕಮಲ ಅಲ್ಲ: ಈಶ್ವರಪ್ಪ

Published:
Updated:

ಬಳ್ಳಾರಿ: ‘ಕಾಂಗ್ರೆಸ್- ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ರಾಜೀನಾಮೆ ಗೂ ನಮ್ಮ ಪಕ್ಷಕ್ಕೂ ಸಂಬಂಧ ಇಲ್ಲ, ರಾಜೀನಾಮೆ ಯಾಕೆ ಕೊಟ್ಟರು ಎಂದು ರಾಜೀನಾಮೆ ಕೊಟ್ಟವರೇ ಹೇಳುತ್ತಾರೆ’ ಎಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇದು ಆಪರೇಷನ್ ಕಮಲ ಅಲ್ಲ, ಆಗುತ್ತಿರುವ ಬೆಳವಣಿಗೆಗಳಿಗೂ ನಮಗೂ ಸಂಬಂಧ ಇಲ್ಲ' ಎಂದರು.

'ನಾನು ಈ ಹಿಂದೆ ಬಳ್ಳಾರಿಗೆ ಬಂದಾಗ ಕಾಕತಾಳೀಯ ಎಂಬಂತೆ ಹೇಳಿದ್ದೆ, ಬಳ್ಳಾರಿಯಿಂದಲೇ ಶಾಸಕರ ರಾಜೀನಾಮೆ ಆರಂಭ ಆಗಬಹುದೆಂಬ  ಮಾತನ್ನು ನಮ್ಮ ಮನೆ ದೇವರು ಬಳ್ಳಾರಿಯ ಚೌಡೇಶ್ವರಿ - ದುರ್ಗಮ್ಮನೇ  ನನ್ನ ಬಾಯಿಂದ ಆಡಿಸಿದ್ದಿರಬಹುದು‌ ಎಂದರು.

ರಾಜ್ಯದಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ರಾಷ್ಟ್ರೀಯ ಮುಖಂಡರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು. ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ  ಇಂದು ರಾಜ್ಯದ ಹಲವೆಡೆ ಸದಸ್ಯತ್ವ ಅಭಿಯಾನ ನಡೆಯುತ್ತಿದೆ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !