ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಿಸಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಗುತ್ತಿಗೆ ಬೇರೆ ಸಂಸ್ಥೆಗೆ ಚಿಂತನೆ: ಶ್ರೀರಾಮುಲು

ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿ ವಿಳಂಬ
Last Updated 7 ನವೆಂಬರ್ 2019, 15:26 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದುಳಿದ ವರ್ಗಗಳ ಇಲಾಖೆಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸದ ಸಂಸ್ಥೆ ಬದಲಿಗೆ ಬೇರೆ ಸಂಸ್ಥೆಗೆ ಕಾಮಗಾರಿ ನೀಡಲು ಚಿಂತನೆ ನಡೆದಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಗ್ಗೆ ಇಂದು ಸಭೆ ನಡೆಸಿ ಮಾಹಿತಿ ಕ್ರೋಢೀಕರಿಸಿದ್ದೇನೆ, ಇಲಾಖೆಯಲ್ಲಿ ಹಣದ ಸಮಸ್ಯೆ ಇಲ್ಲ,1363 ಹಾಸ್ಟಲ್‌‌ಗಳಿಗೆ ಸ್ವಂತ ಕಟ್ಟಡ ಇಲ್ಲ,ಸಿಎಂ ಭೇಟಿಯಾಗಿ ಸ್ವಂತ ಕಟ್ಟಡ ನಿರ್ಮಾಣ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅಗತ್ಯ ವಸತಿ ಮತ್ತು ಗುಣಮಟ್ಟದ ಆಹಾರ ಸೇರಿಅಗತ್ಯ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ ಎಂದ ಅವರು.ಅಧಿಕಾರಿಗಳು ಕೂಡಾ ಒಳ್ಳೆಯ ಕೆಲಸ ಮಾಡ್ತಿದ್ದಾರೆ,ಬಾಕಿ ಕಾಮಗಾರಿಗಳನ್ನ ಪೂರ್ಣಗೊಳಿಸಲು ಖಾಸಗಿಸಂಸ್ಥೆಗೆ ಮನವಿ ಮಾಡುತ್ತೇನೆ. ಈ ಸಂಸ್ಥೆ ಸರಿಯಾಗಿ ಸ್ಪಂದಿಸುತ್ತಿಲ್ಲ,ಕಳೆದ 5 ವರ್ಷಗಳಿಂದ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಿಲ್ಲ,ಇದರಿಂದಾಗಿ ಕಾಮಗಾರಿಗಳು ನೆನಗುದಿಗೆ ಬಿದ್ದಿವೆ, ಹೀಗೆ ಮುಂದುವರಿದರೆ ಬಹಳ ಕಷ್ಟ ಆಗುತ್ತೆ ಅಂತ ಆ ಸಂಸ್ಥೆಗೆ ತಿಳಿಸಿದ್ದೇನೆ ಎಂದರು.

ಮುಂದಿನ ದಿನಗಳಲ್ಲಾದರೂ ಸರಿಪಡಿಸಲು ಹೇಳಿದ್ದೇನೆ,150 ಕಟ್ಟಡ ಕಾಮಗಾರಿ ಸಂಸ್ಥೆಗೆ ನೀಡಲಾಗಿದೆ,50% ಮಾತ್ರ ಕೆಲಸ ಆಗಿದೆ,ವಾರ್ಡ್‌‌ಗಳು ವಸತಿ ನಿಲಯದ ಅಡುಗೆ ಕೋಣೆ ಬಗ್ಗೆ ಜಾಗೃತಿವಹಿಸಬೇಕು, ಈ ಸಂಸ್ಥೆ ಬದಲಾಗಿ ಪರ್ಯಾಯ ಸಂಸ್ಥೆಗೆ ಕಾಮಗಾರಿ ನೀಡುವ ಬಗ್ಗೆ ಚಿಂತನೆ ನಡೆದಿದೆ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲೇ ಬ್ಯಾಕ್ ವರ್ಡ್ ಕ್ರಸ್ಟ್‌ ಸಂಸ್ಥೆ ರಚನೆಗೆ ನಿರ್ಧರಿಸಲಾಗಿದೆ.ಈ ಮೂಲಕ ಸರ್ಕಾರದಿಂದ ಕ್ರಮ ಕೈಗೊಳ್ಳಲು ಮಾತುಕತೆ ನಡೆಯುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT