ಭಾನುವಾರ, ಜನವರಿ 19, 2020
25 °C

ಸಾಗರಮಾಲಾಕ್ಕೆ ವಿರೋಧ: ಸಂಸದ, ಶಾಸಕಿ ಫೋಟೊಗಳಿಗೆ ಸೆಗಣಿ ಎರಚಿ, ಚಪ್ಪಲಿಯೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ಪ್ರತಿಭಟನೆ ಮುಂದುವರಿಸಿದ್ದಾರೆ.

ಮಂಗಳವಾರ ನಗರದ ಮೀನು ಮಾರುಕಟ್ಟೆ ಬಂದ್ ಮಾಡಿದ್ದಾರೆ. ಉದ್ರಿಕ್ತ ಮೀನುಗಾರರು ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಮತ್ತು ಸಂಸದ ಅನಂತಕುಮಾರ ಹೆಗಡೆ ಭಾವಚಿತ್ರಕ್ಕೆ ಸಗಣಿ ‌ಮೆತ್ತಿ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಸಾಗರಮಾಲಾ ವಿರೋಧಿಸಿ ಮೀನುಗಾರ ಮುಖಂಡರು ಇದೇ 16ರಂದು ಕಾರವಾರ ಬಂದ್‌ಗೆ ಕರೆ ನೀಡಿದರು. ಇದೇ ವೇಳೆ ಪ್ರತಿಭಟನಾಕಾರರು ಇಡ್ಲಿ ಸಾಂಬಾರ್ ಅಚ್ಛಾ ಹೆ, ಬಿಜೆಪಿ ಸರ್ಕಾರ ಲುಚ್ಛಾ ಹೆ ಘೋಷಣೆ ಕೂಗಿದರು.
 


ಪ್ರತಿಭಟನಾಕಾರರು ಸಂಸದ ಅನಂತಕುಮಾರ ಹೆಗಡೆ ಸೀರೆ ಉಟ್ಟಂತೆ ಹಾಗೂ ಶಾಸಕಿ ರೂಪಾಲಿ ನಾಯ್ಕ ಪುರುಷರಂತೆ ಫೋಟೊ ಎಡಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. 

ಇದನ್ನೂ ಓದಿ... ಕಾರವಾರ | ಸಾಗರಮಾಲಾ ಯೋಜನೆಗೆ ವಿರೋಧ: 20ಕ್ಕೂ ಹೆಚ್ಚು ಪ್ರತಿಭಟನಾಕಾರರು ವಶಕ್ಕೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು