ಮಂಗಳವಾರ, ಜೂಲೈ 7, 2020
27 °C
ಜಗದೀಶ್ ಶೆಟ್ಟರ್ ಆರೋಪ

ಮೈತ್ರಿ ಸರ್ಕಾರ ಬೀಳಿಸಲು ಟೈಮ್‌ ಬಾಂಬ್ ಫಿಕ್ಸ್ ಮಾಡಿದ್ದ ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದು ರಾಜಕೀಯ ದ್ವೇಷಕ್ಕಾಗಿ ಅಲ್ಲ.  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರೇ ತನಿಖೆ ಮಾಡಿಸಲು ಹೇಳಿದ್ದರು ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಸಿಬಿಐ ತನಿಖೆ ಕೊಟ್ಟಿದ್ದಕ್ಕೆ ಸಿದ್ದರಾಮಯ್ಯಗೆ ಒಳಗೊಳಗೆ ಸಂತೋಷವಿದೆ. ಮೈತ್ರಿ ಸರ್ಕಾರ ಬೀಳಿಸಲು ಸಿದ್ದರಾಮಯ್ಯನವರೇ ಟೈಮ್‌ ಬಾಂಬ್ ಫಿಕ್ಸ್ ಮಾಡಿದ್ದರು ಎಂದು ಆರೋಪಿಸಿದ್ದಾರೆ. 

ಇದನ್ನೂ ಓದಿ: ಇನ್ನೊಬ್ಬರ ಮೇಲೆ ಗೂಬೆಕೂರಿಸಿ ಅಳುವುದೇ ದೇವೇಗೌಡರ ಕೆಲಸ: ಸಿದ್ದರಾಮಯ್ಯ​

ಫೋನ್ ಟ್ಯಾಪಿಂಗ್ ಮೂಲಕ ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡರು ಸಿದ್ದರಾಮಯ್ಯನವರ ಚಲನವಲನ ಗಮನಿಸಿದ್ದಾರೆ. ಪೋನ್ ಕದ್ದಾಲಿಕೆ ಮಾಡಿದಾಗ ಸಿದ್ದರಾಮಯ್ಯ ಪ್ಲ್ಯಾನ್ ಗೊತ್ತಾಗಿದೆ‌. ಹೀಗಾಗಿಯೇ ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರುತ್ತಿದ್ದಾರೆ‌ ಎಂದರು.

ಅದಕ್ಕೆ‌ ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಎಂದು  ದೇವೇಗೌಡರು ಹೇಳುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿಗೆ ಹಿಂಸೆ ಕೊಟ್ಟಿದ್ದಾರೆ: ಶರವಣ​

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು