ಭಾನುವಾರ, ಅಕ್ಟೋಬರ್ 20, 2019
22 °C

ದೇಶದ ಕಾನೂನಿಗಿಂತಲೂ ದ್ವೇಷದ ರಾಜಕಾರಣವೇ ಬಲಿಷ್ಠ: ಡಿಕೆಶಿ

Published:
Updated:

ಬೆಂಗಳೂರು: ದ್ವೇಷದ ರಾಜಕಾರಣವು ಈ ದೇಶದ ಕಾನೂನಿಗಿಂತಲೂ ಹೆಚ್ಚು ಬಲಿಷ್ಠವಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಡಿ.ಕೆ ಶಿವಕುಮಾರ್‌ ಅವರು ಹೇಳಿದ್ದಾರೆ. 

ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಡಿ.ಕೆ ಶಿವಕುಮಾರ್‌ ಅವರನ್ನು ಅಧಿಕಾರಿಗಳು ದೆಹಲಿಯ ರೋಸ್ ಅವೆನ್ಯೂ ರಸ್ತೆಯಲ್ಲಿರುವ ವಿಶೇಷ ನ್ಯಾಯಲಯದ ಎದುರು ಹಾಜರುಪಡಿಸಿದರು. ಕೋರ್ಟ್‌ ಆವರಣದಲ್ಲಿರುವಾಗಲೇ ತಮ್ಮ ಅಭಿಪ್ರಾಯವನ್ನು ವಿಡಿಯೊ ಮಾಡಿ ಮಾಡಿರುವ ಡಿಕೆಶಿ, ಅದನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

‘ದ್ವೇಷದ ರಾಜಕಾರಣವೆಂಬುದು ಈ ದೇಶದ ಕಾನೂನಿಗಿಂತಲೂ ಬಲಿಷ್ಠವಾಗಿದೆ,’ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. 

ಮಂಗಳವಾರ ರಾತ್ರಿ ಇ.ಡಿ ಬಂಧನಕ್ಕೆ ಒಳಗಾಗಿದ್ದ ಡಿ.ಕೆ ಶಿವಕುಮಾರ್‌ ಅವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸುದೀರ್ಘ ವಾದ ವಿವಾದಗಳ ನಂತರ ಡಿಕೆಶಿ ಅವರನ್ನು ಸೆ.13ರ ವರೆಗೆ ಇ.ಡಿ ವಶಕ್ಕೆ ನೀಡಿ ಕೋರ್ಟ್‌ ಆದೇಶಿಸಿತು. 

Post Comments (+)