ಕೃಷಿಕರ ಮಗಳು, ಆಳ್ವಾಸ್‌ನ ಓಲ್ವಿಟ ವಾಣಿಜ್ಯದಲ್ಲಿ ರಾಜ್ಯಕ್ಕೆ ಟಾಪರ್ 

ಶುಕ್ರವಾರ, ಏಪ್ರಿಲ್ 26, 2019
24 °C

ಕೃಷಿಕರ ಮಗಳು, ಆಳ್ವಾಸ್‌ನ ಓಲ್ವಿಟ ವಾಣಿಜ್ಯದಲ್ಲಿ ರಾಜ್ಯಕ್ಕೆ ಟಾಪರ್ 

Published:
Updated:
Prajavani

ಮೂಡುಬಿದಿರೆ: ಸೋಮವಾರ ಪ್ರಕಟವಾದ ದ್ವಿತೀಯ ಪಿಯುಸಿ ವಾಣಿಜ್ಯ ಪರೀಕ್ಷಾ ಫಲಿತಾಂಶದಲ್ಲಿ ಆಳ್ವಾಸ್‌ನ ವಿದ್ಯಾರ್ಥಿನಿ, ಕಿನ್ನಿಗೋಳಿಯ ಕೃಷಿಕರ ಮಗಳು, ಓಲ್ವಿಟ ಅನ್ಸಿಲ್ಲಾ ಡಿಸೋಜಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವ್ಯವಹಾರ ಅಧ್ಯಯನ, ಅಕೌಂಟ್ಸ್, ಗಣಿತ ಮತ್ತು ಸ್ಟ್ಯಾಟಿಸ್ಟಿಕ್‌ನಲ್ಲಿ ತಲಾ 100, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ತಲಾ 98 ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ. ಒಟ್ಟು 600 ಅಂಕಗಳ ಪೈಕಿ 596 ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

‘ಬೆಳಿಗ್ಗೆ 4 ಗಂಟೆಗೆ ಎದ್ದು ಓದುತ್ತಿದ್ದೆ. ಓದಿಗೆ ಅನುಕೂಲವಾಗುವ ಇತರ ಪುಸ್ತಕಗಳಿಂದ ಮಾಹಿತಿ ಪಡಕೊಂಡಿದ್ದೆ. ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ನನ್ನ ಉಪನ್ಯಾಸಕ ವೃಂದ ಹಾಗೂ ಹೆತ್ತವರ ಪ್ರೋತ್ಸಾಹ ತುಂಬ ಸಿಕ್ಕಿದೆ. ಇಲ್ಲಿನ ಶಿಸ್ತು, ಶೈಕ್ಷಣಿಕ ವಾತಾವರಣ ನನ್ನ ಸಾಧನೆಗೆ ಪ್ರೇರಣೆಯಾಯಿತು. ಆಳ್ವಾಸ್‌ನಲ್ಲಿ ಓದಿದ್ದರಿಂದಲೆ ನಾನು ಟಾಪರ್ ಆಗಲು ಸಾಧ್ಯವಾಯಿತು. ಮುಂದೆ ಸಿಎ ಆಗಬೇಕೆಂಬ ಬಯಕೆ ಹೊಂದಿದ್ದೇನೆ’ ಎಂದು ಓಲ್ವಿಟ ‘ಪ್ರಜಾವಾಣಿ’ಗೆ ತಿಳಿಸಿದರು.

ಕಡಿಮೆ ಅಂಕದ ಭಯದಲ್ಲಿ ಕಣ್ಣೀರಿಟ್ಟಿದ್ದರು: ‘ಪರೀಕ್ಷೆ ಬರೆದು ಮನೆಗೆ ಬಂದ ಮಗಳು ವ್ಯವಹಾರ ಅಧ್ಯಯನ ಸ್ವಲ್ಪ ಕಷ್ಟ ಅನ್ನಿಸಿತ್ತು. ಹಾಗಾಗಿ ಕಡಿಮೆ ಅಂಕ ಸಿಗಬಹುದೆಂಬ ಭಯದಲ್ಲಿ ಕಣ್ಣೀರಿಟ್ಟಿದ್ದಳು. ಮಗಳಿಗೆ ಸಮಾಧಾನಪಡಿಸಿದ್ದೆವು. ಈಗ ಆಕೆ ರಾಜ್ಯಕ್ಕೆ ಪ್ರಥಮ ಎಂದಾಗ ನಮಗೆ ಅತ್ಯಂತ ಖುಷಿ ಆಗಿದೆ’ ಎಂದು ಮಗಳ ಸಾಧನೆ ಬಗ್ಗೆ ತಂದೆ ಓಲಿವರ್ ಮಾಧ್ಯಮಕ್ಕೆ ವಿವರಿಸಿದರು.

ಕೃಷಿ ಕುಟುಂಬದವರು: ಓಲ್ವಿಟ ಮಧ್ಯಮ ವರ್ಗದ ಕೃಷಿಕುಟುಂಬದವರು. ಕೊಂಡಿಪಲ್ಕೆಯ ಓಲಿವರ್ ಡಿಸೋಜಾ ಮತ್ತು ಅನಿತಾ ಡಿಸೋಜಾ ದಂಪತಿಯ ಪುತ್ರಿ. ದ್ವಿತೀಯ ಪಿಯುಸಿ ಓದಿರುವ ತಂದೆ ಕೃಷಿಕರಾಗಿದ್ದು ಜತೆಯಲ್ಲಿ ಊರಲ್ಲಿ ಚಿಕ್ಕ ಅಂಗಡಿಯನ್ನು ಹೊಂದಿದ್ದಾರೆ. ಗೃಹಿಣಿಯಾಗಿರುವ ತಾಯಿ ಬಿಎಸ್ಸಿ ಪದವೀಧರೆ.

ಎಸ್ಸೆಸ್ಸೆಲ್ಸಿಯಲ್ಲಿ ಶೇ 98.56 ಅಂಕ ಪಡೆದಿದ್ದ ಓಲ್ವಿಟ ಆಳ್ವಾಸ್‌ನ ಉಚಿತ ಶಿಕ್ಷಣ ಯೋಜನೆಯಡಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !