ಬುಧವಾರ, ಜೂನ್ 23, 2021
23 °C

ಮಗನ ಅಂತ್ಯಸಂಸ್ಕಾರ ನಂತರ ಬೆಂಗಳೂರು ಸೇರಿದ ಸೊಸೆ ಮರಳಿ ಬರಲಿಲ್ಲ: ಗುರು ತಾಯಿ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ಗುರು ಅಂತ್ಯಸಂಸ್ಕಾರದ ನಂತರ ಕೇವಲ ಒಂದು ತಿಂಗಳು ಮಾತ್ರ ಸೊಸೆ ಕಲಾವತಿ ನಮ್ಮ ಜೊತೆಗೆ ಇದ್ದರು. ನಂತರ ಕೆಲಸಕ್ಕೆ ಆಂತ ಬೆಂಗಳೂರಿಗೆ ಹೋದರು. ಈವರೆಗೂ ಅವರು ಬಂದಿಲ್ಲ’ ಹೀಗೆಂದು ಪುಲ್ವಾಮ ದಾಳಿಯ ಹುತಾತ್ಮ ಯೋದ ಎಚ್‌. ಗುರು ಅವರ ತಾಯಿ ಚಿಕ್ಕಹೊಳ್ಳಮ್ಮ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಇದನ್ನೂ ಓದಿ: ಪುಲ್ವಾಮ ದಾಳಿಗೆ ವರ್ಷ| ಯೋಧ ಎಚ್. ಗುರು ಕುಟುಂಬದ ಸ್ಥಿತಿ ಈಗ ಹೇಗಿದೆ ಗೊತ್ತೇ?

ಪುಲ್ವಾಮ ದಾಳಿಗೆ ಇಂದು ಒಂದು ವರ್ಷ. ದಾಳಿಯಲ್ಲಿ ಮಂಡ್ಯದ ಯೋಧ ಎಚ್‌. ಗುರು ಅವರೂ ಪ್ರಾಣತ್ಯಾಗ ಮಾಡಿದ್ದರು. ಶುಕ್ರವಾರ ಕುಟುಂಬಸ್ಥರು ಪುಣ್ಯತಿಥಿ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಗುರು ಅವರ ಪತ್ನಿ ಹೊರತುಪಡಿಸಿ ಕುಟುಂಬಸ್ಥರು ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ತಾಯಿ ಚಿಕ್ಕಹೊಳ್ಳಮ್ಮ, ‘ನಮ್ಮ ಜೊತೆಗೆ ಫೋನ್ ಸಂಪರ್ಕದಲ್ಲಿಯೂ ಸೊಸೆ ಇಲ್ಲ. ಅವರು ಫೋನ್ ಮಾಡಿದ್ದರೆ ನಾನು ಮಾತನಾಡುತ್ತಿದ್ದೆ. ನನಗೆ ಫೋನ್ ಮಾಡಲು ಬರುವುದಿಲ್ಲ. ಅವರು ಯಾಕೆ ದೂರವಾಗಿದ್ದಾರೋ ನನಗೆ ಗೊತ್ತಿಲ್ಲ’ ಎಂದು ಹೇಳಿದರು. 

ಇದನ್ನೂ ಓದಿ:  ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಗುರು ಕುಟುಂಬದಲ್ಲಿ ಕಲಹ; ಹರಿದ ₹15 ಕೋಟಿ

ತಮ್ಮ ಇನ್ನೊಬ್ಬ ಮಗನನ್ನು ಕಲಾವತಿಗೆ ಮದುವೆ ಮಾಡಿಕೊಡುವ ಬಗ್ಗೆ ಕೇಳಿ ಬಂದಿದ್ದ ಊಹಾಪೋಹಗಳ ಕುರಿತು ಮಾತನಾಡಿದ ಚಿಕ್ಕಹೊಳ್ಳಮ್ಮ, ‘ಆ ಬಗ್ಗೆ ನಾವೆಂದೂ ಮಾತನಾಡಿಲ್ಲ. ಅಂದು ಅಂತ್ಯಸಂಸ್ಕಾರಕ್ಕೆ ಬಂದಿದ್ದ ಯಾರೋ ಕೆಲವರು ಆಡಿದ್ದ ಮಾತುಗಳವು. ಮಗ ಸತ್ತ ದುಃಖದಲ್ಲಿದ್ದ ನಾವು ಅಂಥ ವಿಚಾರ ಯೋಜನೆ ಮಾಡಲೂ ಸಾಧ್ಯವಿತ್ತೇ’ ಎಂದು ಪ್ರಶ್ನೆ ಮಾಡಿದ್ದಾರೆ. 

‘ಗುರು ಸತ್ತು ಒಂದು ವರ್ಷ ಆಯ್ತು ಅಂತ ಇವತ್ತು ಪೂಜೆ ಮಾಡ್ತಿದ್ದೀವಿ. ಪ್ರತಿದಿನ ಅವನು ನೆನಪಗ್ತಾನೆ. ಬೆಳಿಗ್ಗೆ–ರಾತ್ರಿ ಕಣ್ಮುಂದೆ ಇರುತ್ತಾನೆ’ ಎಂದು ಆಕೆ ನೋವು ತೋಡಿಕೊಂಡರು. 

ಹಣಕಾಸಿನ ವಿಚಾರವಾಗಿ ಅತ್ತೆ ಹಾಗೂ ಸೊಸೆಯ ನಡುವೆ ಮುನಿಸಿ ಏರ್ಪಟ್ಟಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು. ‘ಆ ರೀತಿಯ ಯಾವುದೇ ಜಗಳ ನಮ್ಮ ನಡುವೆ ಆಗಿಲ್ಲ. ನಮಗೆ ಬಂದಿದ್ದು ನಾವಿಟ್ಟುಕೊಂಡಿದ್ದೇವೆ. ಅವರಿಗೆ ಬಂದಿದ್ದು ಅವರು ತೆಗೆದುಕೊಂಡಿದ್ದಾರೆ,’ ಎಂದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು