ಭಾನುವಾರ, ಮೇ 31, 2020
27 °C

ಕೊರೊನಾ ವಾರಿಯರ್ಸ್‌ಗೆ ಭೋಜನ ವ್ಯವಸ್ಥೆ ಮಾಡಿಸಿದ ರಶ್ಮಿಕಾ ಮಂದಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಕೊರೊನಾ ಮಹಾಮಾರಿಯ ವಿರುದ್ಧ ಹೋರಾಟ ನಡೆಸುತ್ತಿರುವ ಪೊಲೀಸ್‌ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳ ಹಸಿವು ನೀಗಿಸುವ ಕಾರ್ಯವನ್ನು ಚಿತ್ರನಟಿ ರಶ್ಮಿಕಾ ಮಂದಣ್ಣ ತಮ್ಮ ಸಂಸ್ಥೆಯ ವತಿಯಿಂದ ಸದ್ದಿಲ್ಲದೇ ಮಾಡುತ್ತಿದ್ದಾರೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ವಿರಾಜಪೇಟೆಯ ಪೊಲೀಸ್, ಹೋಂ ಗಾರ್ಡ್ಸ್ ಸೇರಿದಂತೆ ಸುಮಾರು 150 ಮಂದಿಗೆ ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆಯನ್ನು ಕಳೆದ 10 ದಿನಗಳಿಂದ ರಶ್ಮಿಕಾ ಮಂದಣ್ಣ ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ತಂದೆ ಎಂ.ಮದನ್ ಮಂದಣ್ಣ ಅವರಿಗೆ ಸೇರಿದ ಸೆರಿನಿಟಿ ಸಂಸ್ಥೆಯಲ್ಲಿ ಅಡುಗೆ ತಯಾರಿಸಿ ವಾಹನದಲ್ಲಿ ಸಿಬ್ಬಂದಿಗಳಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ತಮ್ಮ ಹುಟ್ಟೂರಾದ ವಿರಾಜಪೇಟೆಯಲ್ಲಿ ಹಗಲಿರುಳೆನ್ನದೇ ಕರ್ತವ್ಯದಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಸಸ್ಯಹಾರ ಹಾಗೂ ಮಾಂಸಹಾರ ಊಟದ ವ್ಯವಸ್ಥೆಯನ್ನು ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಮಾಡಿದ್ದಾರೆ.

ಮೇ 17ರವರೆಗೆ ಭೋಜನದ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ ಎಂದು ಸೆರೆನಿಟಿ ಸಂಸ್ಥೆಯ ವ್ಯವಸ್ಥಾಪಕ ವಿಕ್ಕಿ ಚಂಗಪ್ಪ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು