ಭಾನುವಾರ, ಫೆಬ್ರವರಿ 23, 2020
19 °C

20 ಗಂಟೆಯಲ್ಲೇ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಚಿತ್ರಕಲಾ ಪರೀಕ್ಷೆಯ ಮೌಲ್ಯಮಾಪನ ನಡೆದ 20 ಗಂಟೆಯೊಳಗೆಯೇ ಫಲಿತಾಂಶ ಪ್ರಕಟಿಸಲಾಗಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ.

ನವೆಂಬರ್‌ 20ರಿಂದ 22ರವರೆಗೆ ಪರೀಕ್ಷೆ ನಡೆದಿತ್ತು. ಇದೇ 6ರಿಂದ 12ರವರೆಗೆ ದಾವಣಗೆರೆಯ ಎರಡು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆದಿತ್ತು.

‘ಇದೇ ಪ್ರಥಮ ಬಾರಿಗೆ ಆನ್‌ಲೈನ್‌ ಮಾರ್ಕ್ ಪೋರ್ಟಿಂಗ್ ಮೂಲಕ ನೇರವಾಗಿ ಮೌಲ್ಯಮಾಪನ ಕೇಂದ್ರದಿಂದ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಅಂಕಗಳನ್ನು ಮಂಡಳಿಯ ಸರ್ವರ್‌ಗೆ ಪಡೆಯಲಾಯಿತು. ಹೀಗಾಗಿ ಮೌಲ್ಯಮಾಪನ ನಡೆದ 20 ಗಂಟೆಯೊಳಗೆಯೇ ಫಲಿತಾಂಶ ಪ್ರಕಟಿಸುವುದು ಸಾಧ್ಯವಾಗಿದೆ. 36,799 ವಿದ್ಯಾರ್ಥಿಗಳ 2.20 ಲಕ್ಷ ಡಾಟಾಗಳನ್ನು ಪಡೆದು ಎಸ್ಸೆಸ್ಸೆಲ್ಸಿ ಲಾಗಿನ್‌ಗೆ ಒದಗಿಸಲಾಗಿದೆ. ವಿದ್ಯಾರ್ಥಿಗಳ ಮೊಬೈಲ್‌ ಸಂಖ್ಯೆಗೆ ಫಲಿತಾಂಶ ರವಾನಿಸಲಾಗಿದೆ. ಯಾವುದೇ ಮ್ಯಾನ್ಯುವಲ್‌ ಫಲಿತಾಂಶ ಪಟ್ಟಿಯನ್ನು ಕೇಂದ್ರಗಳಿಗೆ ಒದಗಿಸುವುದಿಲ್ಲ’ ಎಂದು ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು