ಭಾನುವಾರ, ಸೆಪ್ಟೆಂಬರ್ 26, 2021
21 °C

ಕೊರೊನಾಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ರಾಮಬಾಣ ಎಂಬ ವದಂತಿ: ಮಾತ್ರೆಗಳು ಖಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಮಲೇರಿಯಾ ರೋಗಿಗಳಿಗೆ ಕೊಡುವ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮಾತ್ರೆ  (HcFc-200) ಹಾಗೂ ಆಂಟಿಬಯಾಟಿಕ್ ಆಗಿ ಬಳಕೆಯಾಗುವ  ಅಜಿತ್ರೊಮೈಸಿನ್ ಮಾತ್ರೆಗೆ ವ್ಯಾಪಕ ಬೇಡಿಕೆ ಬಂದಿದೆ.

ನಗರದ ಯಾವುದೇ ಮೆಡಿಕಲ್ ಶಾಪ್ ಗಳಲ್ಲೂ ಈ ಮಾತ್ರೆಗಳು ಸಿಗುತ್ತಿಲ್ಲ.

ಕೊರೊನಾ ವೈರಸ್ ಸೋಂಕಿಗೆ ಈ ಎರಡೂ ಮಾತ್ರೆಗಳು ರಾಮಬಾಣ ಎಂಬ ವದಂತಿ ಹರಡಿರುವುದರಿಂದ ಜನರು ಕೊಂಡೊಯ್ದು ಮನೆಯಲ್ಲಿ ಶೇಖರಿಸಿಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ ವೈದ್ಯರು ಬರೆದುಕೊಟ್ಟ ಚೀಟಿ ಹಿಡಿದು ಕೊಳ್ಳಲು ಹೋದವರಿಗೂ ನೋ ಸ್ಟಾಕ್ ಎಂಬ ಉತ್ತರ ಮೆಡಿಕಲ್ ಶಾಪ್ ಮಾಲೀಕರಿಂದ ಕೇಳಿಬರುತ್ತಿದೆ.

ಅಜಿತ್ರೊಮೈಸಿನ್ ಮಾತ್ರೆ ಮಾತ್ರ ಸಿಗುತ್ತಿದೆ. ಆದರೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ನಮ್ಮಲ್ಲಿ ಖಾಲಿ ಆಗಿದೆ. ನಾವು ಬೇಡಿಕೆ ಪಟ್ಟಿ ಕಳುಹಿಸಿದ್ದೇವೆ. ಆದರೆ  ಔಷಧ ಸಾಗಣೆ ಲಾರಿಗಳು ಬರುತ್ತಿಲ್ಲ. ಸದ್ಯಕ್ಕೆ ಪೂರೈಕೆ ಆಗುತ್ತಿಲ್ಲ ಎಂದು ಇಲ್ಲಿನ ವಿದ್ಯಾಗಿರಿಯ ಅಪೊಲೊ ಮೆಡಿಕಲ್ಸ್ ನ ಸಿಬ್ಬಂದಿ ಹೇಳುತ್ತಾರೆ.

ಕೊರೊನಾ ಸೋಂಕಿನ ವಿಚಾರದಲ್ಲಿ ಎಲ್ಲವೂ ಕಲಿಕೆಯೇ ಆಗಿದೆ. ಟ್ರಯಲ್ ಅಂಡ್ ಎರರ್ ರೀತಿಯಲ್ಲಿ ಮಲೇರಿಯಾಗೆ ಕೊಡುವ ಮದ್ದು ಕೊರೊನಾಗೆ ಪರಿಣಾಮಕಾರಿ ಎಂಬ ಸುದ್ದಿ ಹರಡಿದೆ. ಆದರೆ ಅದು ಪರಿಣಾಮಕಾರಿಯೇ ಎಂಬುದು ಖಚಿತಪಟ್ಟಿಲ್ಲ ಎಂದು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಹೇಳುತ್ತಾರೆ.

ಜಿಲ್ಲಾ ಆಸ್ಪತ್ರೆಯ ಔಷಧಾಗಾರದಲ್ಲೂ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮಾತ್ರೆ ಸ್ಟಾಕ್ ಇಲ್ಲವಾಗಿದೆ. ನಾವು ಆರು ಸಾವಿರ ಮಾತ್ರೆಗಳ ಪೂರೈಕೆಗೆ ಬೇಡಿಕೆ ಸಲ್ಲಿಸಿದ್ದೇವೆ ಎಂದು ಹೇಳುವ ಡಾ.ಪ್ರಕಾಶ ಬಿರಾದಾರ, ಕೊರೊನಾ ವಿಚಾರದಲ್ಲಿ ಯಾವುದೇ ಔಷಧಿ ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯಂತೆ ಮುಂದುವರೆಯಿರಿ ಎಂದು ಕಿವಿಮಾತು ಹೇಳುತ್ತಾರೆ.

(ವಿಶೇಷ ಸೂಚನೆ: ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧ ಸೇವಿಸುವುದು ಅಪಾಯ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು