ಬೆಂಗಳೂರು: ಸಹಕಾರ ಸಾರಿಗೆಯ ಪುನಶ್ಚೇತನಕ್ಕೆ ಸರ್ಕಾರದಿಂದ ನೆರವಿನ ಭರವಸೆ ದೊರಕದಿದ್ದರೂ, ಬ್ಯಾಂಕ್‌ಗಳ ಮೂಲಕ ಆರ್ಥಿಕ ಚೈತನ್ಯ ನೀಡುವ ಆಶಯ ವ್ಯಕ್ತವಾಗಿದೆ.

ಬುಧವಾರ ಇಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ, ಶಾಸಕರಾದ ಟಿ.ಡಿ.ರಾಜೇಗೌಡ,ಎಸ್.ಎಲ್.ಭೋಜೇಗೌಡ, ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಏಕ್‌ರೂಪ್ ಕೌರ್ ಇದ್ದರು.

‘ಸಮಸ್ಯೆಗೆ ಏನು ಕಾರಣ, ಅದನ್ನು ಬಗೆಹರಿಸುವ ದಾರಿಗಳ ಬಗ್ಗೆ ಮೊದಲು ಅಧ್ಯಯನ ನಡೆಸಬೇಕಾಗಿದೆ. ಜನಪ್ರಿಯವಾಗಿರುವ ಈ ಸಾರಿಗೆ ವ್ಯವಸ್ಥೆಯನ್ನು ಖಂಡಿತ ಮುಚ್ಚುವುದಕ್ಕೆ ಅವಕಾಶ ಕೊಡಬಾರದು, ಬ್ಯಾಂಕ್‌ಗಳಿಂದ ಸಾಲ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು’ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.

‘ಪರಿಹಾರ ಕ್ರಮಕ್ಕೆ ಮೊದಲಾಗಿ ಹಲವು ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿ ಬರುವುದು ಸೂಕ್ತ. ಉಳಿಸಿಕೊಳ್ಳುವ ಪ್ರಯತ್ನ ಖಂಡಿತವಾಗಿಯೂ ನಡೆಯುತ್ತದೆ. ಸರ್ಕಾರದಿಂದಲೇ ನೇರವಾಗಿ ನೆರವು ದೊರಕಿಸಿಕೊಡುವ ಬಗ್ಗೆ ಈಗಲೇ ಹೇಳಲಾಗದು’ ಎಂದರು.

ಈ ಮಧ್ಯೆ, ಮಲೆನಾಡು ಜನಪರ ಒಕ್ಕೂಟದ ಪರವಾಗಿ ಅನಿಲ್ ಹೊಸಕೊಪ್ಪ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದು, ಆರ್ಥಿಕಸಂಕಷ್ಟ ಎದುರಿಸುತ್ತಿರುವ ಸಹಕಾರ ಸಾರಿಗೆಗೆ ಸರ್ಕಾರ ಅನುದಾನ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಕಾರ್ಮಿಕರೇ ಒಗ್ಗೂಡಿ 1991ರಲ್ಲಿ ಸ್ಥಾಪಿಸಿದ್ದ ಸಹಕಾರ ಸಾರಿಗೆಯು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ನೌಕರರು, ರೈತರು, ಸಾಮಾನ್ಯ ನಾಗರಿಕರಿಗೆ ಅನುಕೂಲವಾದ ಸಂಚಾರ ವ್ಯವಸ್ಥೆ ಕಲ್ಪಿಸಿತ್ತು. 75ಕ್ಕೂ ಹೆಚ್ಚು ಬಸ್‍ಗಳ ಸಂಚಾರದಿಂದ ಸಾವಿರಾರು ಜನರಿಗೆ ಹಾಲು, ತರಕಾರಿ, ದವಸ-ಧಾನ್ಯಗಳ ಸಾಗಣೆಗೆ, ಶಾಲಾ-ಕಾಲೇಜುಗಳಿಗೆ ತೆರಳಲು ಸಹಕಾರಿಯಾಗಿತ್ತು. ಇಡೀ ದೇಶದಲ್ಲೇ ಈ ರೀತಿ ಕಾರ್ಮಿಕರು ಸ್ಥಾಪಿಸಿದ್ದ ಮೊದಲ ಸಂಘಟನೆ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು’ ಎಂಬುದನ್ನು ಅವರು ನೆನಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.