ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯಲ್ಲಿ ಒಂದು ವರ್ಷದ ಬಾಲಕ ಸೇರಿ 6 ಜನರಿಗೆ ಕೋವಿಡ್‌-19 ದೃಢ

Last Updated 1 ಮೇ 2020, 11:25 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಒಂದು ವರ್ಷದ ಬಾಲಕ ಸೇರಿ ಒಟ್ಟು ಆರು ಜನರಿಗೆ ಕೋವಿಡ್-19 ಇರುವುದು ಶುಕ್ರವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಎಂಟು ಸಕ್ರಿಯ ಪ್ರಕರಣಗಳು ಇದ್ದಂತಾಗಿದೆ.

ಜಾಲಿನಗರದ ವೃದ್ಧನ (ರೋಗಿ ಸಂಖ್ಯೆ 556) 34 ವರ್ಷದ ಮಗ, 31 ವರ್ಷದ ಸೊಸೆ, 26 ವರ್ಷದ ಮತ್ತೊಬ್ಬ ಸೊಸೆ, 18 ವರ್ಷದ ಇನ್ನೊಬ್ಬ ಸೊಸೆ ಹಾಗೂ ಒಂದು ವರ್ಷದ ಮೊಮ್ಮಗನಿಗೆ ಕೊರೊನಾ ಪಾಸಿಟಿವ್ ಇದೆ ಎಂದು ಪ್ರಯೋಗಾಲಯದಿಂದ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸುದ್ದಿಗಾರರಿಗೆ ತಿಳಿಸಿದರು.

ಬಾಷಾನಗರದ ಆರೋಗ್ಯ ಕೇಂದ್ರದ ಸ್ಟಾಫ್‌ ನರ್ಸ್‌ (ರೋಗಿ ಸಂಖ್ಯೆ 553)ನ 16 ವರ್ಷದ ಮಗನಿಗೂ ಕೊರೊನಾ ವೈರಸ್‌ ಇರುವುದು ದೃಢಪಟ್ಟಿದೆ ಎಂದೂ ಜಿಲ್ಲಾಧಿಕಾರಿ ಹೇಳಿದರು.

ಸೋಂಕಿತ ಎಂಟು ರೋಗಿಗಳಿಗೂ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೃದ್ಧನಿಗೆ ಮಾತ್ರ ವೆಂಟಿಲೇಟರ್‌‌ನಲ್ಲಿಡಲಾಗಿದೆ. ಎಲ್ಲರ ಆರೋಗ್ಯವೂ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬಾಷಾನಗರದ ನರ್ಸ್‌ನ ಪತಿ ಹಾಗೂ ಮೂರು ವರ್ಷದ ಮಗನಿಗೆ ನೆಗೆಟಿವ್‌ ಎಂದು ವರದಿ ಬಂದಿದೆ. ಸೋಂಕಿತ ನರ್ಸ್‌ ವಾರದ ಹಿಂದ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿಸಿದ್ದರು. ಬಾಳಂತಿ, ಹಸುಗೂಸು ಹಾಗೂ ಆಕೆಯ ಮನೆಯವರಲ್ಲೂ ಕೊರೊನಾ ನೆಗೆಟಿವ್ ಎಂದು ವರದಿ ಬಂದಿರುವುದು ಆಶಾದಾಯಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT