ಬುಧವಾರ, ನವೆಂಬರ್ 13, 2019
23 °C
ಸಾರ್ವಕರ್‌ರಿಂದ ಸಮಾಜ ಒಡೆಯುವ ಕೆಲಸ

ಗಾಂಧಿ ಕೊಲೆ ಆರೋಪಿಗಳಲ್ಲಿ ಅವರು ಒಬ್ಬರು: ಸಿದ್ದರಾಮಯ್ಯ ಹೇಳಿದ್ದು ಯಾರ ಬಗ್ಗೆ?

Published:
Updated:

ಹುಬ್ಬಳ್ಳಿ: ಮಹಾತ್ಮ ಗಾಂಧಿ ಕೊಲೆ ಆರೋಪಿಗಳಲ್ಲಿ ಅವರು ಒಬ್ಬರಾಗಿದ್ದರು. ಸಾಕ್ಷಿಗಳ ಕೊರತೆಯಿಂದ ಹೊರಬಂದಿರಬಹುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಕರ್‌ ಹಿಂದುತ್ವ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ. ಅಂತವರಿಗೆ ಭಾರತ್ನ ಬೇಡ. ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗೆ ನೀಡಿ ಎಂದು ಹೇಳಿದ್ದೆ. ಸಾವಿತ್ರಿ ಬಾಫುಲೆ ಅವರಿಗೆ ನೀಡಿದ್ದಕ್ಕೆ ನಾನೇನು ವಿರೋಧ ಮಾಡಿದ್ದೇನೆಯೇ? ಇವರೇಕೆ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಕೊಂಡು ನೋಡಿಕೊಳ್ಳುತ್ತಾರೆ ಎಂದು ತಿರುಗೇಟು ನೀಡಿದರು.

ಇವಿಎಂ ದುರುಪಯೋಗ: ಮತಯಂತ್ರ ಹಾಗೂ ಚುನಾವಣಾ ಆಯೋಗವನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

70 ದಿನಗಳ ಮೊದಲೇ ಚುನಾವಣೆ ಘೋಷಣೆ ಮಾಡಿರುವುದನ್ನು ಇತಿಹಾಸದಲ್ಲಿ ಎಂದಾದರೂ ನೋಡಿದ್ದೀರಾ? ಮತಯಂತ್ರಗಳನ್ನು ಆಯ್ದ ಮತಗಟ್ಟೆಗಳಲ್ಲಿ ಮಾಡಲಾಗುತ್ತಿದೆ ಎಂದರು.

ಮಹಾರಾಷ್ಟ್ರ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಚುನಾವಣಾ ಪ್ರಚಾರಕ್ಕೆ ಹೋದಾಗ ಅಲ್ಲಿನ ಪರಿಸ್ಥಿತಿ ನೋಡಿದ್ದೇನೆ. ಜನ ಕೊಡುವ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು.

ಜನರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಮತ್ತೆ ಪ್ರವಾಹ ಬಂದಿದೆ. ಯಡಿಯೂರಪ್ಪ ನೇತೃತ್ವ ಬಿಜೆಪಿ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)