ಮಂಗಳವಾರ, ಜನವರಿ 21, 2020
19 °C

ನಗು ಮೂಡಿದರೆ ಜೀವನ ಸಾರ್ಥಕ: ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆಂಗ್ಲ ಪದಗಳ ಅತಿಯಾದ ಬಳಕೆ ಹಾಗೂ ಬ್ರ್ಯಾಂಡ್‌ ಬಟ್ಟೆಗಳನ್ನು ತೊಡುವುದರಿಂದ ಜೀವನ ಸಾರ್ಥಕವಾಗುವುದಿಲ್ಲ. ನಮ್ಮ ಅನುಪಸ್ಥಿತಿಯಲ್ಲಿ ಹೆಸರು ಪ್ರಸ್ತಾಪವಾದಾಗಲೂ ಅಲ್ಲಿದ್ದವರ ಮೊಗದಲ್ಲಿ ನಗೆ ಮೂಡಿದರೆ ಆಗ ಸಾರ್ಥಕತೆ ಪದ ಅರ್ಥ ಪಡೆದುಕೊಳ್ಳುತ್ತದೆ’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ತಿಳಿಸಿದರು.

ಅವರ 80ನೇ ವರ್ಷದ ಜನ್ಮದಿನದ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಪ್ರತಿ ವರ್ಷ ಜನ್ಮದಿನದಂದು ಬಡವರಿಗೆ ಬಟ್ಟೆ, ಆಹಾರ ದಾನ ಮಾಡುತ್ತಿದ್ದೆ. ಜೀವನದಲ್ಲಿ ಆಡಂಬರಕ್ಕೆ ಅವಕಾಶ ನೀಡದೇ, ಆದರ್ಶಗ
ಳನ್ನು ರೂಢಿಸಿಕೊಳ್ಳುತ್ತಾ ಸಾಗಬೇಕು. ಸಮಯ ಹೋದಂತೆ ನಮ್ಮವರು ಯಾರು ಎನ್ನುವುದು ಅರಿವಿಗೆ ಬರುತ್ತದೆ. ಬಸವಣ್ಣನ ವಚನಗಳು ಬದುಕಿನ ಪ್ರತಿ ಹಂತಗಳಲ್ಲಿ ಪೇರಣೆ ನೀಡಿದವು’ ಎಂದರು.

ಸಿರಿಗೆರೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ‘ಶಿವರಾಜ ಪಾಟೀಲರು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕರಿಸಿದ 47 ದಿನಗಳಲ್ಲೇ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೊರಬಂದರು. ಅವರ ವಿರುದ್ಧ ಕೆಲವರು ಷಡ್ಯಂತ್ರ ಮಾಡಿ, ಅಧಿ ಕಾರದಿಂದ ಕೆಳಗಿಳಿಸಿದರು’ ಎಂದರು.

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ‘ಶಿವರಾಜ ಪಾಟೀಲ ಅವರು ನ್ಯಾಯಾಂಗ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ ಎಂದರು. ಡಾ.ಅಮರೇಶ್ ಯತಗಲ್
ಸಂಪಾದಕತ್ವದಲ್ಲಿ ಮೂಡಿಬಂದ ‘ಸಾರ್ಥಕ ಬದುಕು’ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಗಾಯಕಿ ಸಂಗೀತಾ ಕಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು